ಅಕ್ರಮ ಹಣ ಸಕ್ರಮಕ್ಕಾಗಿ ಕಾನೂನು ಮಾಡಿದ್ದ ನವಾಝ್ ಶರೀಫ್

Update: 2019-08-03 17:03 GMT

ಇಸ್ಲಾಮಾಬಾದ್, ಆ. 3: ತಾವು ಸಂಪಾದಿಸಿದ ಅಕ್ರಮ ಸಂಪತ್ತನ್ನು ಸಕ್ರಮಗೊಳಿಸುವುದಕ್ಕಾಗಿ ಮಾಜಿ ಪ್ರಧಾನಿ ನವಾಝ್ ಶರೀಫ್‌ರ ಕುಟುಂಬವು 1990ರ ದಶಕದಲ್ಲಿ ಕಾನೂನುಗಳನ್ನು ಮಾಡಿತ್ತು ಎಂದು ಪಾಕಿಸ್ತಾನಿ ಪ್ರಧಾನಿ ಇಮ್ರಾನ್ ಖಾನ್‌ರ ವಿಶೇಷ ಸಹಾಯಕ ಶಹ್ಝಾದ್ ಅಕ್ಬರ್ ಆರೋಪಿಸಿದ್ದಾರೆ.

ಶರೀಫ್‌ರ ಪುತ್ರಿ ಮರ್ಯಮ್ ನವಾಝ್‌ಗೆ ಟೆಲಿಗ್ರಾಫಿಕ್ ಟ್ರಾನ್ಸ್‌ಫರ್ ಮೂಲಕ 1.7 ಕೋಟಿ ರೂಪಾಯಿ ವರ್ಗಾವಣೆ ಮಾಡಲಾಗಿತ್ತು ಹಾಗೂ ಅವರ ಕುಟುಂಬವು ಭ್ರಷ್ಟಾಚಾರ ಮೂಲಕ ಸಾಮ್ರಾಜ್ಯವೊಂದನ್ನೇ ಕಟ್ಟಿತ್ತು ಎಂದು ಅಕ್ಬರ್ ಹೇಳಿದರು.

2016ರಲ್ಲಿ ಶರೀಫ್ ಕುಟುಂಬದ ಸದಸ್ಯರ ಹೆಸರು ಪನಾಮ ದಾಖಲೆಗಳಲ್ಲಿ ಬರುವವರೆಗೆ ಅವರ ಪಾಲಿಗೆ ಎಲ್ಲವೂ ಸುಗಮವಾಗಿ ನಡೆಯಿತು ಎಂದರು.

1.7 ಕೋಟಿ ರೂ.ಯನ್ನು ಮರ್ಯಮ್ ಖಾತೆಗೆ 2008ರಲ್ಲಿ ವರ್ಗಾವಣೆ ಮಾಡಲಾಗಿತ್ತು ಹಾಗೂ ಅದಕ್ಕಾಗಿ 1990ರ ದಶಕದ ಅನುಕೂಲಕರ ಕಾನೂನುಗಳನ್ನು ಬಳಸಲಾಗಿತ್ತು ಎಂದು ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News