×
Ad

ಉಡುಪಿ: ರಾಜ್ಯ ಕಿರಿಯರ ಕ್ರೀಡಾಕೂಟ

Update: 2019-08-03 22:38 IST

ಉಡುಪಿ, ಆ.3: ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಸಂಸ್ಥೆಯ ಆಶ್ರಯದಲ್ಲಿ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಕಿರಿಯರ ಕ್ರೀಡಾಕೂಟವು ಆ.23ರಿಂದ 25ರವರೆಗೆ ನಡೆಯಲಿದೆ.

ಈ ಕ್ರೀಡಾಕೂಟಕ್ಕೆ ಉಡುಪಿ ಜಿಲ್ಲಾ ತಂಡವನ್ನು ಆ.11ರಂದು ರವಿವಾರ ಬೆಳಗ್ಗೆ 9:30ಕ್ಕೆ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣ ಅಜ್ಜರಕಾಡು ಇಲ್ಲಿ ಆಯ್ಕೆ ಮಾಡಲಾಗುವುದು. ಕ್ರೀಡಾಕೂಟವು 14 ವರ್ಷದೊಳಗಿನ , 16,18 ಹಾಗೂ 20ವರ್ಷದೊಳಗಿನ ವಯೋಮಾನದಲ್ಲಿ ನಡೆಯಲಿದೆ.

ಆಯ್ಕೆಯಲ್ಲಿ ಭಾಗವಹಿಸಲಿಚ್ಛಿಸುವ ಕ್ರೀಡಾಪಟುಗಳು ಜನ್ಮ ದಿನಾಂಕಕ್ಕೆ ಸಂಬಂಧಿಸಿದ ದಾಖಲೆಯನ್ನು ಕಡ್ಡಾಯವಾಗಿ ತರಬೇಕು. ಹೆಚ್ಚಿನ ವಿವರಗಳಿಗೆ ಸಂಸ್ಥೆಯ ಕಾರ್ಯದರ್ಶಿ ದಿನೇಶ್ ಕುಮಾರ್ ಎ. (ಮೊ:9886118207; 9900410776) ಇವರನ್ನು ಸಂಪರ್ಕಿಸುವಂತೆ ಸಂಸ್ಥೆಯ ಅಧ್ಯಕ್ಷ ಕೆ. ರಘುರಾಮ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News