×
Ad

ಕುಮ್ಕಿ ಜಮೀನು ಆಕ್ರಮಣ ವಿರುದ್ಧ ಸಮಾಲೋಚನಾ ಸಭೆ

Update: 2019-08-03 22:41 IST

ಬ್ರಹ್ಮಾವರ, ಆ.3:ಅನ್ಯ ಉದ್ದೇಶಗಳಿಗಾಗಿ ಕೃಷಿಕರ ಕುಮ್ಕಿ ಜಮೀನನ್ನು ವಶ ಪಡಿಸಿಕೊಂಡು ಕೃಷಿಗೆ ಮತ್ತು ಕೃಷಿಕರಿಗೆ ಹೊಡೆತ ನೀಡಲು ಹೊರಟಿರುವ ಸರಕಾರದ ಹುನ್ನಾರದ ವಿರುದ್ಧ ಕೃಷಿಕರನ್ನು ಎಚ್ಚರಿಸುವ ಸಮಾಲೋಚನಾ ಸಭೆಯನ್ನು ಜಿಲ್ಲಾ ಕೃಷಿಕ ಸಂಘ ಬ್ರಹ್ಮಾವರ ವಲಯ ಸಮಿತಿ ಆ.6ರ ಮಂಗಳವಾರ ಸಂಜೆ 5:30ಕ್ಕೆ ಬೈಕಾಡಿ ಶ್ರೀ ಕಾಮೇಶ್ವರಿ ದೇವಸ್ಥಾನ ವಠಾರದಲ್ಲಿ ಆಯೋಜಿಸಿದೆ.

ಈ ಸಮಾಲೋಚನಾ ಸಭೆಯಲ್ಲಿ ಕೃಷಿಕ ಸಂಘದ ಜಿಲ್ಲಾ ಪದಾಧಿಕಾರಿಗಳಾದ ರಾಮಕೃಷ್ಣ ಶರ್ಮ ಬಂಟಕಲ್ಲು, ಕುದಿ ಶ್ರೀನಿವಾಸ ಭಟ್, ದಿನೇಶ್ ಶೆಟ್ಟಿ ಹೆರ್ಗ, ರವೀಂದ್ರ ಗುಜ್ಜರಬೆಟ್ಟು, ಶ್ರೀನಿವಾಸ ಬಲ್ಲಾಳ್ ಮಲ್ಲಂಪಳ್ಳಿ ಮೊದಲಾದವರು ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕೃಷಿಕ ಬಾಂಧವರು ತಪ್ಪದೇ ಭಾಗವಹಿಸುವಂತೆ ವಲಯ ಸಮಿತಿಯ ಪದಾಧಿಕಾರಿ ಪ್ರಬಾಕರ ವಿ. ಶೆಟ್ಟಿ ಆರೂರು ಮತ್ತು ಭೋಜ ಶೆಟ್ಟಿ ಮುಂಡ್ಕಿನಜಡ್ಡು ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News