ಬೈಕ್‌ಗೆ ಟ್ರಕ್ ಢಿಕ್ಕಿ: ರಾಷ್ಟ್ರೀಯ ಶೌರ್ಯ ಪ್ರಶಸ್ತಿ ವಿಜೇತ ಬಾಲಕ ಸಹಿತ ಇಬ್ಬರು ಮೃತ್ಯು
Update: 2019-08-03 22:51 IST
ಭುವನೇಶ್ವರ, ಆ. 3: ಮೊಸಳೆ ದವಡೆಯಿಂದ ತನ್ನ ಮಾವನನ್ನು ರಕ್ಷಿಸಿರುವುದಕ್ಕೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪಡೆದಿದ್ದ ಬಾಲಕ ಸಹಿತ ಇಬ್ಬರು ಒಡಿಶಾದ ಕೇಂದ್ರಪಾರ ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಮಕ್ಕಳ ಕಲ್ಯಾಣಕ್ಕಿರುವ ಭಾರತೀಯ ಮಂಡಳಿ ಸ್ಥಾಪಿಸಿದ ಈ ಶೌರ್ಯ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದ ಸ್ವೀಕರಿಸಿದ್ದ 16ರ ಹರೆಯದ ಸಿತು ಮಲ್ಲಿಕ್ ಹಾಗೂ ಆತನ ಸೋದರ ಸಂಬಂಧಿ ಬಾಪು ಮಲಿಕ್ ರಾಜ್‌ನಗರ್ ಪ್ರದೇಶದ ಜಾರಿಮುಲಾ ಸಮೀಪ ಶುಕ್ರವಾರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
‘‘ಇವರಿಬ್ಬರು ಸಂಚರಿಸುತ್ತಿದ್ದ ಬೈಕ್‌ಗೆ ಟ್ರಕ್ ಢಿಕ್ಕಿ ಹೊಡೆಯಿತು’’ ಎಂದು ಅವರು ತಿಳಿಸಿದ್ದಾರೆ. ಸೀತು ಹಾಗೂ ಆತನ ಸೋದರ ಸಂಬಂಧಿ ನಿಧನಕ್ಕೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸಂತಾಪ ವ್ಯಕ್ತಪಡಿಸಿದ್ದಾರೆ ಹಾಗೂ ಅವರಿಬ್ಬರ ಕುಟುಂಬದ ಸದಸ್ಯರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಧನ ಘೋಷಿಸಿದ್ದಾರೆ.