ಪಡುಬಿದ್ರಿಯಲ್ಲಿ ಮುಂದುವರಿದ ಕಡಲ್ಕೊರೆತ: ಉಚ್ಚಿಲ, ಎರ್ಮಾಳಿನಲ್ಲಿ ತಾತ್ಕಾಲಿಕ ತಡೆಗೋಡೆ

Update: 2019-08-03 17:37 GMT

ಪಡುಬಿದ್ರಿ: ಕಳೆದ ಎರಡು ದಿನಳಿಂದ ಪಡುಬಿದ್ರಿ, ಎರ್ಮಾಳು, ಉಚ್ಚಿಲದಲ್ಲಿ ಕಾಣಿಸಿಕೊಂಡ ಕಡಲ್ಕೊರೆತ ಶನಿವಾರ ತೀವ್ರಗೊಂಡಿದೆ.

ಪಡುಬಿದ್ರಿ ಬೀಚ್ ಪ್ರದೇಶದಲ್ಲಿ ಶನಿವಾರ ಕಡಲ್ಕೊರೆತ ತೀವ್ರಗೊಂಡಿದ್ದು, ಪಡುಬಿದ್ರಿ ಬೀಚ್‍ನಲ್ಲಿ ಪ್ರವಾಸೋಧ್ಯಮ ಇಲಾಖೆಯಿಂದ ಅಳವಡಿಸಿದ ವಿದ್ಯುತ್ ದೀಪಗಳ ಕಂಬಗಳು ಕೊರೆತಕ್ಕೆ ಸಿಲುಕಿ ಅಪಾಯದಲ್ಲಿದೆ. ಇಲ್ಲಿ ಈಗಾಗಲೇ ಕಾಂಕ್ರೀಟ್ ರಚನೆಗಳು ಹಾನಿಯಾಗಿವೆ. 
ಉಚ್ಚಿಲ, ಎರ್ಮಾಳಿನಲ್ಲಿ ಕಡಲ್ಕೊರೆತದಿಂದ ಹಾನಿಗೊಳಗಾದ ಪ್ರದೇಶಕ್ಕೆ ಬೃಹತ್ ಗಾತ್ರದ ಕಲ್ಲುಗಳೂ ಕಡಲಿಗೆ ಸುರಿದು ತಾತ್ಕಾಲಿಕ ತಡೆಗೋಡೆ ನಿರ್ಮಿಸಲಾಗುತ್ತಿದೆ. ಈ ಭಾಗದಲ್ಲಿನ ಹಲವಾರು ತೆಂಗಿನ ಮರಗಳು ಕಡಲ ಪಾಲಾಗುತ್ತಿದ್ದು, ವಾಸ್ತವ್ಯದ ಮನೆಗಳೂ ಹಾನಿಯಾಗುತ್ತಿವೆ. ಮೀಟರ್ ದೂರದಲ್ಲಿ ಮೀನುಗಾರಿಕಾ ಸಂಪರ್ಕ ರಸ್ತೆಯೂ ನೀರು ಪಾಲಾಗುವ ಪರಿಸ್ಥಿತಿಯು ಸ್ಥಳೀಯ ನಿವಾಸಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. 

ಪಡುಬಿದ್ರಿಯಲ್ಲಿ ಸುಮಾರು 150 ಮೀಟರ್‍ನಷ್ಟು ಕೊರೆತ ಉಂಟಾಗಿದೆ. ಕಾಡಿಪಟ್ಣ ಬಳಿ ಬಂಡೆಕಲ್ಲುಗಳನ್ನು ತಂದು ಸುರಿಯಲಾಗಿದೆ.  ಕಾಡಿಪಟ್ಣ ರಾಘು ಸಾಲ್ಯಾನ್ ಮನೆ ಬಳಿ ಹಲವಾರು ಗಾಳಿ ಹಾಗೂ ತೆಂಗಿನ ಮರಗಳು ಸಮುದ್ರ ಪಾಲಾಗಿವೆ. 

ಶಾಸಕ ಲಾಲಾಜಿ ಆರ್ ಮೆಂಡನ್, ತಹಶೀಲ್ದಾರ್ ಮಹಮ್ಮದ್ ಇಸಾಕ್, ಕಂದಾಯ ಪರಿವೀಕ್ಷಕ ರವಿಶಂಕರ್, ಗ್ರಾಮಕರಣಿಕ ಶ್ಯಾಮ್‍ಸುಂದರ್, ಗ್ರಾಮ ಸಹಾಯಕ ಜಯರಾಮ ಮತ್ತಿತರರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News