​ಲೈಂಗಿಕ ಕಿರುಕುಳ: ದಾಖಲಾದ ಇ- ದೂರುಗಳೆಷ್ಟು ಗೊತ್ತೇ ?

Update: 2019-08-04 04:11 GMT

ಹೊಸದಿಲ್ಲಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ "ಲೈಂಗಿಕ ಕಿರುಕುಳ ಎಲೆಕ್ಟ್ರಾನಿಕ್ಸ್" ಬಾಕ್ಸ್‌ಗೆ ಕಳೆದ ಎರಡು ವರ್ಷಗಳಲ್ಲಿ 612 ದೂರುಗಳು ಬಂದಿವೆ.

ಈ ಪೈಕಿ 196 ದೂರುಗಳು ಕೇಂದ್ರ ಸರ್ಕಾರಿ ಉದ್ಯೋಗಿಗಳಿಂದ ಬಂದಿದ್ದು, 103 ರಾಜ್ಯ ಸರ್ಕಾರಿ ಉದ್ಯೋಗಿಗಳಿಂದ ಹಾಗೂ 313 ದೂರುಗಳು ಖಾಸಗಿ ಸಂಸ್ಥೆಗಳಿಂದ ಬಂದಿವೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ರಾಜ್ಯಸಭೆಯಲ್ಲಿ ಲಿಖಿತ ಪ್ರಶ್ನೆಯೊಂದಕ್ಕೆ ನೀಡಿರುವ ಉತ್ತರದಲ್ಲಿ ಈ ಅಂಕಿ ಅಂಶ ನೀಡಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ 2017ರಲ್ಲಿ ​www.shebox.nic.in ಶೀರ್ಷಿಕೆಯಡಿ ಆನ್‌ಲೈನ್ ದೂರು ನಿರ್ವಹಣಾ ವ್ಯವಸ್ಥೆಯನ್ನು ಆರಂಭಿಸಿತ್ತು. ಉದ್ಯೋಗ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ಬಗ್ಗೆ ದೂರು ನೀಡಲು ಈ ವ್ಯವಸ್ಥೆ ಆರಂಭಿಸಲಾಗಿತ್ತು. ಉದ್ಯೋಗ ಸ್ಥಳದ ಕಿರುಕುಳಗಳ ಬಗ್ಗೆ ಪ್ರತಿ ಮಹಿಳೆಯರು ಸುಲಭವಾಗಿ ದೂರು ನೀಡಲು ಅನುವಾಗುವಂತೆ ಈ ವ್ಯವಸ್ಥೆ ಆರಂಭಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News