ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಸಭೆ

Update: 2019-08-04 10:47 GMT

ಮಂಗಳೂರು: ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ  ಕಾರ್ಯಕಾರಿಣಿ ಸಭೆ ನಗರದ ಮಲ್ಲಿಕಟ್ಟೆಯಲ್ಲಿರುವ ಸುಮ ಸದನದಲ್ಲಿ ಇತ್ತೀಚಿಗೆ ಜರಗಿತು.

ಪ್ರತಿಷ್ಠಾನದ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಪ್ರಧಾನ ಕಾರ್ಯದರ್ಶಿ ಭಾಸ್ಕರ ರೈ ಕುಕ್ಕುವಳ್ಳಿ ಅವರು ಸೆ.7 ರಂದು ಮಂಗಳೂರು ಪುರಭವನದಲ್ಲಿ ಜರಗುವ 'ನಮ್ಮ ಅಬ್ಬಕ್ಕ - ಸಾಂಸ್ಕೃತಿಕ ಸಂಭ್ರಮ' ದ ರೂಪು ರೇಷೆಗಳನ್ನು ವಿವರಿಸಿದರು. ಸಂಘಟನಾ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಸಾಂಸ್ಕೃತಿಕ ಕಾರ್ಯಕ್ರಮಗಳ ಪರಿಚಯ ನೀಡಿದರು. ಅವಿಭಜಿತ ಜಿಲ್ಲೆಯ ಹಿರಿಯ ಸಾಧಕರೊಬ್ಬರಿಗೆ 'ರಾಣಿ ಅಬ್ಬಕ್ಕ ಸೇವಾ ಪ್ರಶಸ್ತಿ' ನೀಡಲು ಸಭೆಯಲ್ಲಿ ನಿರ್ಧರಿಸಲಾಯ್ತು. 

ಅಗಲಿದ ಗಣ್ಯರಿಗೆ ಸಂತಾಪ

ಇತ್ತೀಚಿಗೆ ಅಗಲಿಹೋದ ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಎಸ್.ಡಿ.ಪೆಜೆತ್ತಾಯ ಮತ್ತು ನಾಟಕಕಾರ ಸೀತಾರಾಮ ಕುಲಾಲ್ ಅವರಿಗೆ ಪ್ರತಿಷ್ಠಾನದ ವತಿಯಿಂದ ಸಂತಾಪ ಸೂಚಿಸಲಾಯಿತು.

ವಿರಾಂಟ್  ಕೋಶಾಧಿಕಾರಿ ಪಿ.ಡಿ. ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ನಿರ್ಮಲ್ ಭಟ್ ಕೊಣಾಜೆ ವಂದಿಸಿದರು. ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಪದಾಧಿಕಾರಿಗಳಾದ ಸತೀಶ್ ಸುರತ್ಕಲ್, ವಿಜಯಲಕ್ಷ್ಮಿ ಬಿ.ಶೆಟ್ಟಿ, ಸುಮತಿ ಎಸ್.ಹೆಗ್ಡೆ, ಸುಮಾ ಪ್ರಸಾದ್, ವಿನುತಾ ನಾಯ್ಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News