ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿದ ಯುವಕ: ಸ್ಥಳೀಯ ಮೀನುಗಾರರಿಂದ ರಕ್ಷಣೆ
Update: 2019-08-04 19:30 IST
ಮಂಗಳೂರು, ಆ.4: ಉಳ್ಳಾಲ ಸಮೀಪದ ಸೇತುವೆಯಿಂದ ನೇತ್ರಾವತಿ ನದಿಗೆ ಯುವಕನೋರ್ವ ಸಂಜೆ ವೇಳೆ ಹಾರಿದ್ದು, ಸ್ಥಳೀಯ ಮೀನುಗಾರರು ಆತನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಯುವಕ ಗಿರೀಶ್ (32) ಎಂಬಾತನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಂಕನಾಡಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.