×
Ad

ಸಸ್ಯಗಳೇ ನಮ್ಮ ಹಿರಿಯರ ಆರೋಗ್ಯವರ್ಧಕ ಔಷಧಿಗಳು: ಗೀತಾ ವಾಗ್ಲೆ

Update: 2019-08-04 20:08 IST

ಶಿರ್ವ, ಆ.4: ಕಾಲಕ್ಕನುಗುಣವಾಗಿ ಪರಿಸರದಲ್ಲಿ ಬೆಳೆಯುವ ನೂರಾರು ಸಸ್ಯಗಳಲ್ಲಿ ಸಮೃದ್ಧ ಔಷಧೀಯ ಅಂಶಗಳಿದ್ದು, ನಮ್ಮ ಹಿರಿಯರು ಪ್ರತಿಯೊಂದು ಕಾಯಿಲೆಗೂ ಅವುಗಳನ್ನು ಬಳಸಿ ಆರೋಗ್ಯಪೂರ್ಣ ಜೀವನ ನಡೆಸಿದ್ದರು. ಪರಿಸರದಲ್ಲಿ ಬೆಳೆಯವ ನೂರಾರು ಸಸ್ಯಗಳು ಹಿರಿಯರ ಆರೋಗ್ಯವರ್ಧಕ ಔಷಧಿಗಳಾಗಿವೆ ಎಂದು ಉಡುಪಿ ತಾಪಂ ಸದಸ್ಯೆ ಹಾಗೂ ಬಂಟಕಲ್ಲು ಶ್ರೀ ದುರ್ಗಾ ಚಂಡೆ ಬಳಗದ ಅಧ್ಯಕ್ಷೆ ಗೀತಾ ವಾಗ್ಲೆ ಹೇಳಿದ್ದಾರೆ.

ಶಿರ್ವ ರೋಟರಿ ವತಿಯಿಂದ ಶಿರ್ವ ಕೋಡು ಪಂಜಿಮಾರು ಪ್ರಗತಿಪರ ಕೃಷಿಕ ರೊನಾಲ್ಡ್ ಡಿಸೋಜರ ನಿವಾಸದಲ್ಲಿ ರವಿವಾರ ಆಯೋಜಿಸಲಾದ ಆಟಿಯಲ್ಲೊಂದು ದಿನ ಕಾರ್ಯಕ್ರಮವನ್ನು ಕಲಶೆಗೆ ಭತ್ತ ಸುರಿಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಆಟಿ ತಿಂಗಳು ಕೃಷಿಕರ ಪಾಲಿನ ಅತ್ಯಂತ ಕಷ್ಠಕರ ತಿಂಗಳಾಗಿದ್ದು, ಅಂದು ಅವರು ಬೇರೆ ವಿಧಿಯಿಲ್ಲದೆ ಆಹಾರಕ್ಕಾಗಿ ಬಳಸಿದ ಸೊಪ್ಪು, ಬೇರು, ಗೆಡ್ಡೆ ತಿನಿಸುಗಳನ್ನು ನಾವು ಇಂದು ಸಂಭ್ರಮವಾಗಿ ಆಚರಿಸುವ ಮೂಲಕ ನಮ್ಮ ಮಕ್ಕಳಿಗೆ ಹಿರಿಯರ ಜೀವನಕ್ರಮ ರಿಚಯಿಲಾಗುತ್ತಿದೆ ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ಶಿರ್ವ ರೋಟರಿ ಅಧ್ಯಕ್ಷ ಸುನಿಲ್ ಕಬ್ರಾಲ್ ವಹಿಸಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ಜಾನಪದ ಪರಿಷತ್‌ನಿಂದ ಸಾಧಕರತ್ನ ಪ್ರಶಸ್ತಿ ಪುರಸ್ಕೃತ ಫಾರೂಕ್ ಚಂದ್ರನಗರ ಅವರನ್ನು ತಾಪಂ ಸದಸ್ಯ ಮೈಕಲ್ ರಮೇಶ್ ಡಿಸೋಜ ಸನ್ಮಾನಿಸಿದರು. ಆಟಿ ತಿಂಗಳ ವಿಷಯದಲ್ಲಿ ರಸಪ್ರ್ನೆ ಸ್ಫರ್ಧೆಯನ್ನು ಏರ್ಪಡಿಸಲಾಯಿತು.

ಹಿರಿಯರಾದ ರೀತಾ ಡಿಸೋಜ, ರೊನಾಲ್ಡ್ ಡಿಸೋಜ ಉಪಸ್ಥಿತರಿದ್ದರು. ರೋಟರಿ ಕಾರ್ಯದರ್ಶಿ ವಿಷ್ಣುಮೂರ್ತಿ ಸರಳಾಯ ವಂದಿಸಿದರು. ದೆಂದೂರು ದಯಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ನಂತರ ಕೆಸರು ಗದ್ದೆಯಲ್ಲಿ ವಿವಿಧ ಸ್ಫರ್ದೆಗಳು ಜರಗಿದವು. 31 ಬಗೆ ಆಟಿ ತಿಂಗಳ ಖಾದ್ಯಗಳು ಮಧ್ಯಾಹ್ನದ ಸೌಹಾರ್ದ ಭೋಜನ ಕೂಟದಲ್ಲಿ ಮೇಳೈಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News