×
Ad

ಮಾಧ್ಯಮಗಳಲ್ಲಿ ಜಾಹಿರಾತು ಆಧಾರಿತ ಸುದ್ದಿಗೆ ಮಹತ್ವ: ಬಿ.ಎಲ್.ಶಂಕರ್

Update: 2019-08-04 20:14 IST

ಬ್ರಹ್ಮಾವರ, ಆ.4: ಸಂವಿಧಾನದ ನಾಲ್ಕನೇ ಅಂಗವಾದ ಪತ್ರಿಕಾರಂಗದಲ್ಲಿ ಇಂದು ಸಾಕಷ್ಟು ಬದಲಾವಣೆಗಳಾಗಿವೆ. ಮಾಧ್ಯಮಗಳಲ್ಲಿ ಜಾಹಿರಾತು ಆಧಾರಿತ ಸುದ್ದಿಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಸೇವಾ ರೂಪದಲ್ಲಿದ್ದ ಪತ್ರಿಕೋದ್ಯಮ ಇಂದು ಉದ್ಯಮವಾಗಿ ಬದಲಾಗಿದೆ ಎಂದು ಹಿರಿಯ ರಾಜಕಾರಣಿ ಬಿ.ಎಲ್.ಶಂಕರ್ ಅಭಿಪ್ರಾಯಪಟ್ಟಿದ್ದಾರೆ.

ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಬಂಟರ ಭವನದಲ್ಲಿ ರವಿವಾರ ನಡೆದ ‘ಪ್ರಸಕ್ತ ಕಾಲಘಟ್ಟದಲ್ಲಿ ಪತ್ರಿಕೋದ್ಯಮ’ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ವಿಷಯ ಮಂಡಿಸಿ ಅವರು ಮಾತನಾಡಿದರು. ಆದರೂ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಲು ಮಾಧ್ಯಮಗಳೇ ಕಾರಣ ಎಂದು ಅವರು ಹೇಳಿದರು.

ಉತ್ತಮ ಸಂಸ್ಕೃತಿಯ ಪ್ರಜಾಪ್ರಭುತ್ವ ನಮ್ಮ ದೇಶದಲ್ಲಿ ಬಲವಾಗಿದೆ. ಬೇರೆ ಯಾವ ದೇಶದಲ್ಲೂ ನಾವು ಇದನ್ನು ಕಾಣಲಾರೆವು. ಸ್ವಾತಂತ್ರ ಪೂರ್ವದಲ್ಲಿ ದೇಶದಲ್ಲಿ 3,300 ಪತ್ರಿಕೆಗಳಿದ್ದು, ಇದೀಗ 100 ಭಾಷೆಗಳಲ್ಲಿ 60 ಸಾವಿರ ಪತ್ರಿಕೆಗಳು ಪ್ರಕಟಗೊಳ್ಳುತ್ತಿದೆ. ಇವುಗಳು ನಮ್ಮ ದೇಶದ ಹಿರಿಮೆಯನ್ನು ಸಾರುತ್ತಿವೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಇಂದಿನ ಮಾಧ್ಯಮಗಳಲ್ಲಿ ವಾಸ್ತವಾಂಶ ಬದಲಾಗಿದೆ. ಪತ್ರಕರ್ತರು ಅಭಿಪ್ರಾಯಗಳನ್ನು ವ್ಯಕ್ತ ಪಡಿಸುವತ್ತ ಗಮನ ಹರಿಸದೇ ನಿಜಾಂಶ ವನ್ನು ಮಾತ್ರ ಬಿತ್ತರಿಸಿದಲ್ಲಿ ಮಾಧ್ಯಮ ಉಳಿಯು ವಂತಾಗುತ್ತದೆ ಎಂದರು.

ಬೆಂಗಳೂರಿನ ಪತ್ರಕರ್ತ ಅಜಿತ್ ಹನುಮಕ್ಕನವರ್ ಮಾತನಾಡಿ, ಪತ್ರಿಕೋದ್ಯಮ ಇಂದು ಅನೇಕರಿಗೆ ಉದ್ಯೋಗ ನೀಡಿದೆ. ಪತ್ರಕರ್ತರಿಗೆ ನಿಲುವು ಒಲವು ಬೇಕು ಎಂದ ಅವರು, ಆಧುನಿಕ ತಂತ್ರಜ್ಞಾನದ ಕಾರಣ ಭವಿಷ್ಯದಲ್ಲಿ ಪತ್ರಿಕೋದ್ಯಮದಲ್ಲಿ ಹಲವಾರು ಬದಲಾವಣೆಗಳಾಗುತ್ತಿರುವುದು ಬೇಸರದ ಸಂಗತಿ ಎಂದರು.

ಬೆಂಗಳೂರಿನ ಪತ್ರಕರ್ತ ಅಜಿತ್ ಹನುಮಕ್ಕನವರ್ ಮಾತನಾಡಿ, ಪತ್ರಿಕೋದ್ಯಮ ಇಂದು ಅನೇಕರಿಗೆ ಉದ್ಯೋಗ ನೀಡಿದೆ. ಪತ್ರಕರ್ತರಿಗೆ ನಿಲುವು ಒಲವು ಬೇಕು ಎಂದ ಅವರು, ಆುನಿಕತಂತ್ರಜ್ಞಾನದಕಾರಣವಿಷ್ಯದಲ್ಲಿ ಪತ್ರಿಕೋದ್ಯಮದಲ್ಲಿ ಹಲವಾರು ಬದಲಾವಣೆಗಳಾಗುತ್ತಿರುವುದು ಬೇಸರದ ಸಂಗತಿ ಎಂದರು.

ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ, ಕಾರ್ಯದರ್ಶಿ ರಾಜೇಶ್ ಗಾಣಿಗ ಅಚ್ಲಾಡಿ ಉಪಸ್ಥಿತರಿದ್ದರು. ಪತ್ರಕರ್ತ ಶಿವರಾಮ ಆಚಾರ್ಯ ಸ್ವಾಗತಿಸಿ, ಶೇಷಗಿರಿ ಭಟ್ ವಂದಿಸಿದರು.

ನಾಗರಾಜ್ ಅಲ್ತಾರ್ ಕಾರ್ಯಕ್ರಮ ನಿರೂಪಿಸಿದರು. ನಂತರ ವಿದ್ಯಾರ್ಥಿ ಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News