ರಾಮಕೃಷ್ಣ ಮಿಷನ್‌ನ ಸ್ವಚ್ಛ ಮಂಗಳೂರು ಅಭಿಯಾನದ ಶ್ರಮದಾನ
ಮಂಗಳೂರು, ಆ.4: ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಹಮ್ಮಿಕೊಳ್ಳಲಾದ ಸ್ವಚ್ಛ ಮಂಗಳೂರು ಅಭಿಯಾನದ 5ನೇ ಹಂತದ 35ನೇ ಶ್ರಮದಾನವು ರವಿವಾರ ಮಾರ್ನಮಿಕಟ್ಟೆ ಪರಿಸರದಲ್ಲಿ ಜರುಗಿತು. ಕಾಸ್ಸಿಯಾ ಚರ್ಚ್‌ನ ಫಾ. ಹೆರಾಲ್ಡ್ ಮಸ್ಕರೇನಸ್ ಅಭಿಯಾನಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.
ಬಳಿಕ ಸ್ವಚ್ಛ ಮಂಗಳೂರು ಅಭಿಯಾನದಡಿ ಮೋರ್ಗನ್ಸ್‌ಗೇಟ್ ರಸ್ತೆ ಮಾರ್ನಮಿಕಟ್ಟೆಯಲ್ಲಿ ನೂತನವಾಗಿ ನಿರ್ಮಿಸಲಾದ ಪ್ರಯಾಣಿಕರ ತಂಗುದಾಣವನ್ನು ಮಾಜಿ ಶಾಸಕ ಜೆ.ಆರ್. ಲೋಬೊ ಉದ್ಘಾಟಿಸಿದರು.
ಈ ಸಂದರ್ಭ ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ, ಸತೀಶ್ ಭಟ್, ಪ್ರವೀಣ್ ಶೆಟ್ಟಿ, ಸಚಿನ್ ಕಾಮತ್, ಕರಣ ಜಿ, ಶಿವರಾಂ ಆಡೂರ್, ರಾಮಕೃಷ್ಣ ಕೊಟ್ಟಾರಿ ಮತ್ತಿತರರು ಉಪಸ್ಥಿತರಿದ್ದರು.
ಶ್ರಮದಾನ: ಸ್ವಚ್ಛತಾ ಅಭಿಯಾನದ ಪ್ರಧಾನ ಸಂಯೋಜಕ ಉಮಾನಾಥ್ ಕೋಟೆಕಾರ್ ನೇತೃತ್ವದಲ್ಲಿ ಮಾರ್ನಮಿಕಟ್ಟೆ ವೃತ್ತದಿಂದ ಮೋರ್ಗನ್ಸ್ ಗೇಟ್ ರಸ್ತೆಯಲ್ಲಿ ಸ್ವಚ್ಛತೆಯನ್ನು ಮಾಡಲಾಯಿತು. ಹರೀಶ್ ಪ್ರಭು, ಉಮಾಕಾಂತ ಸುವರ್ಣ, ಮುಖೇಶ್ ಆಳ್ವ ಮತ್ತಿತರರು ಸಹಕರಿಸಿದ್ದರು.