ಮಂಗಳೂರು ನಗರ ಪಾಲಿಕೆ ವ್ಯಾಪ್ತಿ: ಅನಧಿಕೃತ ಹೋರ್ಡಿಂಗ್ಸ್ ತೆರವುಗೊಳಿಸಲು ಸೂಚನೆ

Update: 2019-08-04 16:21 GMT

ಮಂಗಳೂರು, ಆ.4: ಮಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಹೋರ್ಡಿಂಗ್ಸ್/ದಿಕ್ಸೂಚಿ ಫಲಕ, ಕಟೌಟ್, ಪ್ಲೆಕ್ಸ್ ಬ್ಯಾನರ್, ಬಂಟಿಂಗ್ಸ್‌ಗಳನ್ನು ಅಳವಡಿಸಿರುವುದು ಕಾನೂನುಬಾಹಿರವಾಗಿದೆ. ಅಲ್ಲದೆ ಇದರಿಂದ ನಗರದ ಸ್ವಚ್ಚತೆ ಮತ್ತು ಸೌಂದರ್ಯಕ್ಕೆ ಅಡ್ಡಿಯಾಗುತ್ತಿರುವುದು ಕಂಡುಬರುತ್ತಿವೆ.

ಮುಂದಿನ ದಿನಗಳಲ್ಲಿ ಧಾರ್ಮಿಕ ಆಚರಣೆಗಳು, ಹಬ್ಬ ಹರಿದಿನಗಳು ಇರುವುದರಿಂದ ಅನೇಕ ಸಂಘಟನೆಗಳು ಪ್ಲೆಕ್ಸ್ ಬ್ಯಾನರ್/ಕಟೌಟ್/ಬಂಟಿಂಗ್ಸ್/ಪೋಸ್ಟರ್‌ಗಳನ್ನು ಅನಧಿಕೃತವಾಗಿ ಅಳವಡಿಸುತ್ತಿರುವುದು ಪಾಲಿಕೆಯ ಗಮನಕ್ಕೆ ಬಂದಿರುತ್ತದೆ.

ನಗರದ ಸ್ವಚ್ಛತೆಯನ್ನು ಮತ್ತು ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಇವುಗಳನ್ನೆಲ್ಲಾ ಅನುಮತಿಯಿಲ್ಲದೆ ಪಾಲಿಕೆಯ ವ್ಯಾಪ್ತಿಯಲ್ಲಿ ಅಳವಡಿಸದಂತೆ ಮನಪಾ ಆಯುಕ್ತರು ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News