ಬಾಂಗ್ಲಾ ಭೀಕರ ಪ್ರವಾಹಕ್ಕೆ ಕನಿಷ್ಠ 109 ಬಲಿ:16 ಜಿಲ್ಲೆಗಳು ಜಲಾವೃತ

Update: 2019-08-04 16:40 GMT

ಢಾಕಾ,ಆ.4: ಬಾಂಗ್ಲಾದೇಶದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಉಂಟಾಗಿರುವ ಭೀಕರ ನೆರೆಗೆ ಕನಿಷ್ಠ 109 ಮಂದಿ ಸಾವನ್ನಪ್ಪಿದ್ದಾರೆ. ಭಾರತದ ಜೊತೆಗಿನ ಬಾಂಗ್ಲಾ ಗಡಿಪ್ರದೇಶದಲ್ಲಿರುವ ಪರ್ವತಗಳಿಂದ ಮಳೆ ನೀರು ಧುಮ್ಮಿಕ್ಕಿ ಹರಿಯುತ್ತಿದ್ದು ನೆರೆಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿದೆ.

ಬಾಂಗ್ಲಾದ 16 ಜಿಲ್ಲೆಗಳಲ್ಲಿ ನೆರೆಯಿಂದಾಗಿ 108 ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಅಪಾರವಾದ ಮನೆ, ಬೆಳೆಗಳು, ರಸ್ತೆಗಳು ಹಾಗೂ ಹೆದ್ದಾರಿಗಳಿಗೆ ಭಾರೀ ಹಾನಿಯಾಗಿದೆ. ಎಂದು ಆ ದೇಶದ ರಾಷ್ಟ್ರೀಯ ವಿಕೋಪ ಪ್ರಕ್ರಿಯಾ ಸಮನ್ವಯ ಕೇಂದ್ರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 ಬಾಂಗ್ಲಾದ ವಿವಿಧ ಜಿಲ್ಲೆಗಳಲ್ಲಿ ಜುಲೈ ತಿಂಗಳ ಮೊದಲ ವಾರದಿಂದೀಚೆಗೆ ಕನಿಷ್ಠ 60 ಲಕ್ಷ ಮಂದಿ ಪ್ರವಾಹದಿಂದಾಗಿ ಕನಿಷ್ಟ 60 ಲಕ್ಷ ಮಂದಿ ಪೀಡಿತರಾಗಿದ್ದು, ಸಾವಿರಾರು ಕುಟುಂಬಗಳು ಮನೆಮಾರು ತೊರೆದು ಸುರಕ್ಷಿತ ಪ್ರದೇಶಗಳಿಗೆ ತೆರಳಿವೆಯೆದಂು ಅವರು ಹೇಳಿದ್ದಾರೆ. ಆದಾಗ್ಯೂ ಪ್ರವಾಹ ಪರಿಸ್ಥಿತಿಯಲ್ಲಿ ಈಗ ಸುಧಾರಣೆಯಾಗುತ್ತಿದ್ದು, ಬಹುತೇಕ ಜಿಲ್ಲೆಗಳ ನದಿಗಳಲ್ಲಿ ಜಲಮಟ್ಟ ಇಳಿಕೆಯಾಗುತ್ತಿದೆ ಎಂದರು.

ಬಾಂಗ್ಲಾದಲ್ಲಿ 230ಕ್ಕೂ ಅಧಿಕ ನದಿಗಳು ಹರಿಯುತ್ತಿದ್ದು, ಮಳೆಗಾಲದಲ್ಲಿ ಅವು ಉಕ್ಕಿಹರಿಯುವುದರಿಂದ ಪ್ರತಿ ವರ್ಷವೂ ತಗ್ಗುಪ್ರದೇಶಗಳು ಪ್ರವಾಹಪೀಡಿವಾಗುದು ಸಾಮಾನ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News