ಕಟಪಾಡಿ: ಪ್ರತಿಭಾ ಪುರಸ್ಕಾ, ಯಾಜಕರ -ಹೆತ್ತವರ ದಿನಾಚರಣೆ

Update: 2019-08-04 16:47 GMT

ಕಾಪು, ಆ.4: ಕಟಪಾಡಿ ಸಂತ ವಿನ್ಸೆಂಟ್ ದಿ ಪಾವ್ಲ್ ದೇವಾಲಯದ ಕೆಥೊಲಿಕ್ ಸಭಾ ಘಟಕ, ಕೌಟಂಬಿಕ ಆಯೋಗ ಮತ್ತು ಧಾರ್ಮಿಕ ಆಯೋಗದ ಜಂಟಿ ಸಹಯೋಗದೊಂದಿಗೆ ಪ್ರತಿಭಾ ಪುರಸ್ಕಾರ, ಯಾಜಕರ ಮತ್ತು ಹೆತ್ತವರ ದಿನಾಚರಣೆಯನ್ನು ರವಿವಾರ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಚರ್ಚಿನ ಧರ್ಮಗುರು ವಂ.ರೋನ್ಸನ್ ಡಿಸೋಜ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಕಲಿಕೆಯೊಂದಿಗೆ ಜೀವನದಲ್ಲಿ ನಿರ್ದಿಷ್ಟ ಗುರಿಯನ್ನು ಹೊಂದಿರಬೇಕು. ಈ ಮೂಲಕ ಸಮಾಜದ ಹಾಗೂ ದೇಶದ ಯಶಸ್ವಿ ನಾಗರಿಕರಾಗಿ ಬಾಳುವಂತಾಗಬೇಕು ಎಂದರು.

ಈ ಸಂದರ್ಭದಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಸಲಾಯಿತು. ಯಾಜಕರ ದಿನಾಚರಣೆಯ ನೆನಪಿಗಾಗಿ ಹೋಲಿಕ್ರೋಸ್ ಸೆಮನರಿಯ ಧರ್ಮಗುರುಗಳಾದ ವಂ.ಡೆರೆನ್ಸ್ ಮತ್ತು ವಂ.ವಿಲ್ಫ್ರೇಡ್ ಡಾಯಸ್ ಹಾಗೂ 50ವರ್ಷ ವೈವಾಹಿಕ ಜೀವನ ಪೂರೈಸಿದ ವಿನ್ಸೆಂಟ್ ಮತ್ತು ಐಡಾ ಡಿಸೋಜ ದಂಪಂತಿಯನ್ನು ಅಭಿನಂದಿಸ ಲಾಯಿತು.

ವಾಲ್ಟರ್ ರೊಜಾರಿಯೊ, ಗ್ರೇಸಿ ಮೊಂತೆರೋ, ಸಲೋನಿ ಹೆತ್ತವರು ಮತ್ತು ಯಾಜಕರ ಸೇವೆಯ ಕುರಿತು ಅಭಿಪ್ರಾಯ ಹಂಚಿಕೊಂಡರು. ಚರ್ಚಿನ ಪಾಲನಾ ಸಮಿಯ ಉಪಾಧ್ಯಕ್ಷ ಲೆಸ್ಲಿ ಸುವಾರಿಸ್, ಕಾರ್ಯದರ್ಶಿ ಕ್ಯಾಥರಿನ್ ರೊಡ್ರಿಗಸ್, 18 ಆಯೋಗಗಳ ಸಂಚಾಲಕ ವಿಲ್ಪ್ರೇಡ್ ಲೂವಿಸ್, ಕುಂಟುಂಬ ಆಯೋಗದ ಸಂಚಾಲಕಿ ಶಾಂತಿ ಮೊಂತೆರೋ, ಕಥೊಲಿಕ್ ಸಭಾ ಅಧ್ಯಕ್ಷ ಬ್ರಾಯನ್ ಕೊರೆಯಾ, ಕಾರ್ಯದರ್ಶಿ ನೆಲ್ಸನ್ ಬಾರ್ನೇಸ್ ಉಪಸ್ಥಿತರಿದ್ದರು.

ಲವೀನಾ ಪಿರೇರಾ ಸ್ವಾಗತಿಸಿದರು. ಅಲ್ವಿಟಾ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News