ವೈಂಡಿಂಗ್ ಶಾಪ್‌ನಲ್ಲಿ ಕಳವಿಗೆ ಯತ್ನ
Update: 2019-08-04 22:20 IST
ಮಲ್ಪೆ, ಆ.4: ಮಧ್ವನಗರ ನಾಗನಕಟ್ಟೆ ಬಳಿಯ ಸುಖದಾಯಿನಿ ಎಂಬ ವೈಂಡಿಂಗ್ ಶಾಪ್‌ಗೆ ನುಗ್ಗಿದ ಕಳ್ಳರು ಕಳವಿಗೆ ಯತ್ನಿಸಿರುವ ಘಟನೆ ಆ.1ರಿಂದ ಆ.3ರ ಮಧ್ಯಾವಧಿಯಲ್ಲಿ ನಡೆದಿದೆ.
ಅಂಗಡಿಯ ಮುಖ್ಯದ್ವಾರದ ಬೀಗ ಮುರಿದು ಒಳಗಡೆ ನುಗ್ಗಿದ ಕಳ್ಳರು, ಸಾಮಾಗ್ರಿಗಳನ್ನು ಚೆಲ್ಲಾ ಪಿಲ್ಲಿ ಮಾಡಿ ಕಳ್ಳತನಕ್ಕೆ ಪ್ರಯತ್ನಿಸಿ ಪರಾರಿಯಾಗಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.