ಕಂದಕ್ ಮುಸ್ಲಿಂ ಜಮಾಅತ್ ವತಿಯಿಂದ ರಕ್ತದಾನ ಶಿಬಿರ
ಮಂಗಳೂರು : ಕಂದಕ್ ಮುಸ್ಲಿಂ ಜಮಾಅತ್ ಇದರ ವತಿಯಿಂದ ಬ್ಲಡ್ ಡೋನರ್ಸ್ ಮಂಗಳೂರು ಸಹಭಾಗಿತ್ವದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಸಹಕಾರದೊಂದಿಗೆ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ಬದ್ರಿಯಾ ಕಾಲೇಜು ಕಂದಕ್ ನಲ್ಲಿ ಆಯೋಜಿಸಲಾಗಿತ್ತು.
ಶಿಬಿರದಲ್ಲಿ ಮಕ್ಕಳ ತಜ್ಞರು, ಮಹಿಳಾ ತಜ್ಞರು, ಸಾಮಾನ್ಯ ಆರೋಗ್ಯ ತಪಸಣಾ ಚಿಕಿತ್ಸೆ ಸಾರ್ವಜನಿಕರಿಗೆ ಉಚಿತವಾಗಿ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಡಾ.ಚಂದ್ರಪ್ರಭ ವೈದ್ಯಾಧಿಕಾರಿ ನಗರ ಆರೋಗ್ಯ ಕೇಂದ್ರ ಬಂದರು, ಡಾ.ಪ್ರಚೇತ್ ಯನೆಪೋಯ ಮೆಡಿಕಲ್ ಕಾಲೇಜು, ಡಾ.ಶಂಸುದ್ದೀನ್ ಮಕ್ಕಳ ತಜ್ಞರು ಯನೆಪೋಯ, ಕಾಲೇಜು, ಡಾ.ಶರತ್ ಹಿರಿಯ ತಜ್ಞರು ಮತ್ತು ರಕ್ತನಿಧಿ ಅಧಿಕಾರಿ, ರಕ್ತನಿಧಿ ಉಸ್ತುವಾರಿಗಳಾದ ಆ್ಯಂಟೋನಿ ಮತ್ತು ಅಶೋಕ್, ಆಪ್ತ ಸಮಾಲೋಚಕಿ ಶ್ರೀಲಾತ ಹಾಗೂ ಅವರ ಸಿಬ್ಬಂದಿಗಳು, ಕಂದಕ್ ಮುಸ್ಲಿಂ ಜಮಾಅತ್ ಸಂಸ್ಥೆಯ ಕೆ.ಪಿ.ಮೊಯಿದಿನ್, ಸಲಾಂ ಕಂದಕ್, ಶರೀಫ್ ಕಂದಕ್, ನಾಸೀರ್, ಸಿದ್ದೀಕ್ ಕಂದಕ್, ಸ್ಥಳೀಯ ಪಾಲಿಕೆ ಸದಸ್ಯರಾದ ಅಬ್ದುಲ್ ಲತೀಫ್ ಕಂದಕ್, ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್ ಸದಸ್ಯರುಗಳಾದ ಕಾಸಿಂ, ಮುನ್ಝೀರ್ ಹಸನ್, ಇವರೊಂದಿಗೆ ಕಂದಕ್ ಮುಸ್ಲಿಂ ಜಮಾಅತ್ ಸದಸ್ಯರುಗಳಾದ ಆಸೀಫ್ ಕಂದಕ್, ಅಶ್ರಫ್ ಕೆ, ಆರೀಫ್, ಮುಸ್ತಫ, ಅಬ್ದುಲ್ ಸಲಾಂ, ಅಲ್ತಾಫ್ ಹುಸೈನ್, ಫಯಾಝ್ ಕಂದಕ್, ಕೆ.ಪಿ.ರಿಯಾಜ್, ಶಾಕೀರ್ ಕೆ, ಮುಕ್ತಾರ್, ಮುಝಫರ್, ಇಬ್ರಾಹಿಂ ಶಕೀಬ್, ಶಾರೂಕ್ ಕಂದಕ್, ಹಕೀಂ, ಅಶ್ರಫ್ ಅಲಿಯಬ್ಬ, ಅಫ್ರಾಝ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ತಂಡದ ಸಿದ್ದೀಕ್ ಮಂಜೇಶ್ವರ, ದಾವೂದ್, ಸಲಾಂ, ಫಯಾಝ್, ಮುನೀರ್, ಸಿನಾನ್ ಉಪಸ್ಥಿತರಿದ್ದರು.