ಬಂಟ್ವಾಳ : ಕಳವು, ದರೋಡೆ ಪ್ರಕರಣದ ಮಹಿಳಾ ಆರೋಪಿ ಸೆರೆ
Update: 2019-08-04 22:46 IST
ಬಂಟ್ವಾಳ : ಕಳವು, ದರೋಡೆ ಪ್ರಕರಣಗಳಲ್ಲಿ ಬಂಟ್ವಾಳ ಸಹಿತ ದ.ಕ, ಉಡುಪಿ ಜಿಲ್ಲೆಯ ನಾನಾ ಠಾಣೆಗಳಿಗೆ ಬೇಕಾಗಿದ್ದ, ನಾಲ್ಕು ವರ್ಷ ಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬಳನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನೇತ್ರಾವತಿ ಯಾನೆ ನೇತ್ರಮ್ಮ (37) ಶಿವಮೊಗ್ಗ ಜಿಲ್ಲೆಯ ಮತ್ತೂರು ಮಡಿಕೆಕಟ್ಟೆಯವಳಾಗಿದ್ದು, 2013ರಲ್ಲಿ ಬಂಟ್ವಾಳ ತಾಲೂಕಿನಲ್ಲಿ ನಡೆದ ಕಳವು, ದರೋಡೆ ಪ್ರಕರಣವೊಂದರಲ್ಲಿ ಈಕೆ ಬೇಕಾಗಿದ್ದಳು. ಈಕೆ ವಿರುದ್ಧ ಉಪ್ಪಿನಂಗಡಿ, ಬಂಟ್ವಾಳ ನಗರ, ಬೆಳ್ತಂಗಡಿ, ಪುಂಜಾಲಕಟ್ಟೆ, ಸುಳ್ಯ, ಗಂಗೊಳ್ಳಿ ಪೊಲೀಸ್ ಠಾಣೆಗಳಲ್ಲಿ ಕೇಸುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.