ನಿರ್ಮಾಣ ಹಂತದಲ್ಲಿರುವ ಮನೆಯ ಟೈಲ್ಸ್ ಕಳವು ಪ್ರಕರಣ; ಮೂವರ ಬಂಧನ
Update: 2019-08-04 22:48 IST
ಭಟ್ಕಳ: ಕಳೆದ 15 ದಿನಗಳ ಹಿಂದೆ ನಗರದ ಕಿದ್ವಾಯಿ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ನಾಲ್ಕು ಅಂತಸ್ತಿನ ಕಟ್ಟಡವೊಂದರಲ್ಲಿ ಟೈಲ್ಸ್, ಸಿಮೆಂಟ್ ಮತ್ತು ವಿದ್ಯುತ್ ವೈರ್ ಗಳನ್ನು ಕಳವು ಮಾಡಿದ ಪ್ರಕರಣ ಸಂಬಂಧ ನಗರ ಠಾಣಾ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಹೆಬಳೆ ಪಂಚಾಯತ್ ವ್ಯಾಪ್ತಿಯ ಯೋಗೇಶ್ ದೇವಾಡಿಗ (28), ತಲಾಂದ್ ನಿವಾಸಿಗಳಾದ ಚೇತನ ನಾಯ್ಕ (22) ಹಾಗೂ ರಾಜೇಶ್ ನಾಯ್ಕ(20) ಎಂದು ಗುರುತಿಸಲಾಗಿದೆ.
ಕಳೆದ 15 ದಿನಗಳ ಹಿಂದೆ ಕಿದ್ವಾಯಿ ರಸ್ತೆಯಲ್ಲಿ ಇಸ್ಮಾಯಿಲ್ ಜುಬಾಪು ಎಂಬುವವರ ನಿರ್ಮಾಣ ಹಂತದಲ್ಲಿರುವ ಮನೆಯಿಂದ 150 ಬಾಕ್ಸ್ ಟೈಲ್ಸ್ ಹಾಗೂ ಸಿಮೆಂಟ್ ಮತ್ತು ವಿದ್ಯುತ್ ವೈರ್ ಗಳನ್ನು ಕಳುವುಗೈಯಲಾಗಿತ್ತು ಈ ಕುರಿತಂತೆ ಇಸ್ಮಾಯಿಲ್ ಜುಬಾಪು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.