ಗಡಿಯಾರ : ರಕ್ತದಾನ ಶಿಬಿರ, ಸನ್ಮಾನ ಕಾರ್ಯಕ್ರಮ

Update: 2019-08-04 17:24 GMT

ವಿಟ್ಲ : ಬೋಫೋರ್ಸ್ ಗಡಿಯಾರ,  ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಮಹಮ್ಮದ್ ಶಮೀರ್, ಪಿ.ಬಿ.ಅಬ್ದುಲ್ ಹಮೀದ್, ಮೊಹಮ್ಮದ್ ಆಶೀಕ್, ಮೊಹಮ್ಮದ್ ಶಫೀಕ್, ನಿಝಾರ್ ಗಡಿಯಾರ, ಹಾಗೂ ಮೋಹನ್ ಕುಮಾರ್ ಇವರ ಸ್ಮರಣಾರ್ಥ  ರಕ್ತದಾನ ಶಿಬಿರ ಹಾಗೂ ಸನ್ಮಾನ ಸಮಾರಂಭವು ರವಿವಾರ ಮಾಣಿ ಸಮೀಪದ ಗಡಿಯಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಗಡಿಯಾರ ಮದರಸದ ಮಾಜಿ ಸದರ್ ಉಸ್ತಾದ್ ಉಸ್ಮಾನ್ ದಾರಿಮಿ ಉದ್ಘಾಟಿಸಿದರು. ಕೆದಿಲ ಗ್ರಾಮ ಪಂ. ಅಧ್ಯಕ್ಷ ಅಣ್ಣಪ್ಪ ಕುಲಾಲ್  ಅಧ್ಯಕ್ಷತೆ ವಹಿಸಿದ್ದರು. 

ಗಡಿಯಾರ ಎಂ.ಜೆ.ಎಂ. ಅದ್ಯಕ್ಷ ಅಬ್ದುಲ್ ಅಝೀಝ್, ಕೆದಿಲ ಗ್ರಾ.ಪಂ. ಸದಸ್ಯ ಉಮ್ಮರಬ್ಬ ಗಡಿಯಾರ,  ರಶೀದ್ ಸಖಾಫಿ, ಗಡಿಯಾರ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಇಬ್ರಾಹಿಂ, ದೈಹಿಕ ಶಿಕ್ಷಕ ಜನಾರ್ದನ, ಡಾ. ಮನೀಶ್, ಪತ್ರಕರ್ತ ಲತೀಫ್ ನೇರಳಕಟ್ಟೆ, ಬ್ಲಡ್ ಡೋನರ್ಸ್ ನಿರ್ವಾಹಕ ಫಾರೂಕ್ ಬಿಗ್ ಗ್ಯಾರೇಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. 

ಇದೇ ವೇಳೆ ನಿವೃತ್ತ ಶಿಕ್ಷಕರಾದ ರಾಮಚಂದ್ರ ಮಾಸ್ಟರ್ ನೇರಳಕಟ್ಟೆ, ಗಿರಿಯಪ್ಪ ಮಾಸ್ಟರ್ ಪೆರಾಜೆ, ಸಂಜೀವ ಮಾಸ್ಟರ್ ಹಾಗೂ ಮದರಸ ಮುಖ್ಯ ಶಿಕ್ಷಕ ಉಸ್ಮಾನ್ ದಾರಿಮಿ ಇವರನ್ನು ಸನ್ಮಾನಿಸಲಾಯಿತು.

ಬೋಪೋರ್ಸ್ ಗಡಿಯಾರ ಪ್ರಮುಖರಾದ ಶರೀಫ್ ಗಡಿಯಾರ, ಉನೈಸ್ ಗಡಿಯಾರ, ಕಬೀರ್ ಬಾವ, ಸೈಫ್ ಗಡಿಯಾರ, ಫಾರೂಕ್ ಕಲ್ಲಾಜೆ, ಹಂಝ ಗಡಿಯಾರ, ನಿಸಾರ್ ಸತ್ತಿಕಲ್ಲು. ಬ್ಲಡ್ ಡೋನರ್ಸ್ ನ ಸಾಹುಲ್, ಸಿರಾಜ್ ಮೊದಲಾದವರು ಉಪಸ್ಥಿತರಿದ್ದರು.

ಬೋಪೋರ್ಸ್ ಅಧ್ಯಕ್ಷ ಜಿ.ಎಂ.ಆರ್.ರಫೀಕ್ ಸ್ವಾಗತಿಸಿ, ವಂದಿದಿಸಿದರು. ರಝಾಕ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News