ಡೆಂಗ್ ನಿಯಂತ್ರಣಕ್ಕಾಗಿ ಆಯುಷ್ ವೈದ್ಯರಿಗೆ ತರಬೇತಿ
ಮಂಗಳೂರು, ಆ.5: ಜಿಲ್ಲಾ ಆಯುಷ್ ಇಲಾಖೆ ಹಾಗೂ ಆಯುಷ್ ಫೌಂಡೇಶನ್ ವತಿಯಿಂದ ನಗರದ ವೆನ್ಲಾಕ್ ಆಸ್ಪತ್ರೆಯ ಡಾ.ವಿವೇಕಾನಂದ ಪ್ರಭು ಸಭಾಂಗಣದಲ್ಲಿ ರವಿವಾರ ಆಯುಷ್ ಪದವೀಧರ ನೋಂದಾಯಿತ ವೈದ್ಯರಿಗಾಗಿ ಡೆಂಗ್ ರೋಗ ನಿಯಂತ್ರಣ ಮತ್ತು ಚಿಕಿತ್ಸಾ ವಿಧಾನ ಗಳ ಬಗ್ಗೆ ತರಬೇತಿ ಕಾರ್ಯಕ್ರಮ ನಡೆಯಿತು.
ದ.ಕ.ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ನವೀನ್‌ಚಂದ್ರ ಕುಲಾಲ್ ಮಾಹಿತಿಯನ್ನು ನೀಡಿ ಡೆಂಗ್ ರೋಗ ಬಂದರೂ ಗಾಬರಿಗೊಳ್ಳದೆ ಮನೆಯಲ್ಲೇ ಇದ್ದು ಸಾಕಷ್ಟು ನೀರು ಕುಡಿಯುವ ಅಭ್ಯಾಸ, ವಿಶ್ರಾಂತಿ ಪಡೆಯುವುದು ಅಗತ್ಯವಾಗಿರುತ್ತದೆ. ಮಲೇರಿಯಾ ಇತ್ಯಾದಿ ರಕ್ತ ಪರೀಕ್ಷೆಗಳನ್ನು ಮಾಡಿಸಬೇಕು. ರೋಗ ಉಲ್ಬಣಗೊಂಡಲ್ಲಿ ಮಾತ್ರ ಆಸ್ಪತ್ರೆಗೆ ದಾಖಲಾದರೆ ಉತ್ತಮ. ಕೇವಲ ಭಯದಿಂದ ಸಾಮಾನ್ಯ ಜ್ವರಕ್ಕೂ ದಾಖಲಾಗುವ ಅಗತ್ಯವಿಲ್ಲ ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಮುಹಮದ್ ಇಕ್ಬಾಲ್ ಮಾತನಾಡಿದರು. ಆಯುಷ್ ಫೌಂಡೇಶನ್ ಅಧ್ಯಕ್ಷ ಡಾ.ಗೋಪಾಲಕೃಷ್ಣ ನಾಯಕ್ ಸ್ವಾಗತಿಸಿದರು. ವೇದಿಕೆಯಲ್ಲಿ ಡಾ.ಪ್ರವೀಣ್ ಜೇಕೊಬ್, ಡಾ.ವೀರಗಣೇಶ್ ಮೋಗ್ರ, ಡಾ.ಕೇಶವ್ ಪಿ.ಕೆ. ಉಪಸ್ಥಿತರಿದ್ದರು. ಪ್ರಧಾನ ಕಾರ್ಯ ದರ್ಶಿ ಡಾ.ಸಂತೋಷ್ ಶೆಟ್ಟಿ ವಂದಿಸಿದರು. ಡಾ.ಜ್ಯೋತಿ ಗಣೇಶ್ ಕಾರ್ಯಕ್ರಮ ನಿರೂಪಿಸಿದರು.