×
Ad

ಉಡುಪಿ: ಮರಳುಗಾರಿಕೆ ಶೀಘ್ರವೇ ಆರಂಭಿಸುವಂತೆ ಒತ್ತಾಯ

Update: 2019-08-05 22:32 IST

ಉಡುಪಿ, ಆ.5: ಮರಳುಗಾರಿಕೆ ಸಂಬಂಧ ಉಡುಪಿ ಜಿಲ್ಲಾಧಿಕಾರಿ ತಕ್ಷಣವೇ 7 ಮಂದಿ ಸದಸ್ಯರ ಸಮಿತಿಯ ಸಭೆ ಕರೆದು ಮರಳುಗಾರಿಕೆಗೆ ಪರವಾನಿಗೆಯನ್ನು ಪಡೆದಿರುವವರಿಗೆ ಪರವಾನಿಗೆ ನೀಡಿ ತುರ್ತಾಗಿ ಮರಳು ಗಾರಿಕೆಯನ್ನು ಆರಂಭಿಸಬೇಕು ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲಿ ಮರಳುಗಾರಿಕೆ ಪುನರ್ ಆರಂಭಿಸುವಂತೆ ಹಾಗೂ ಮಳೆಗಾಲ ದಲ್ಲಿ ಜೂನ್‌ನಿಂದ ಸಪ್ಟೆಂಬರ್ ತಿಂಗಳವರೆಗಿನ ನಿಷೇಧವನ್ನು ಪುನರ್ ಪರಿ ಶೀಲಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು, ಅದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದಾರೆ.

ಜಿಲ್ಲೆಯಲ್ಲಿ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಮೀನುಗಾರಿಕೆ ನಿಷೇಧ ಇರುವುದರಿಂದ ಆ ಸಮಯದವರೆಗೆ ಮಾತ್ರ ಮರಳುಗಾರಿಕೆ ನಿಷೇಧಿಸಿ ಆಗಸ್ಟ್ ತಿಂಗಳಿನಿಂದ ಮರಳುಗಾರಿಕೆ ಆರಂಭಿಸಲು ಸಿಆರ್‌ಝೆಡ್ ಕ್ಲಿಯರೆನ್ಸ್ ನೀಡ ಲಾದ ಸರಕಾರದ ಪತ್ರದಲ್ಲಿ ವಿಧಿಸಿರುವ ಹೆಚ್ಚುವರಿ ಶರತ್ತನ್ನು ಮಾರ್ಪಾಡು ಗೊಳಿಸಲಾಗಿದೆ. ಇದೀಗ ಆಗಸ್ಟ್ನಿಂದ ಮರಳುಗಾರಿಕೆಯನ್ನು ಆರಂಭಿಸಲು ಒಪ್ಪಿಗೆ ಸೂಚಿಸಿರುವುದರಿಂದ ತಕ್ಷಣ ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಳ್ಳ ಬೇಕು ಎಂದು ರಘುಪತಿ ಭಟ್ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News