ಆ.6: ಅಲ್ ಮದೀನದಲ್ಲಿ ಖತಮುಲ್ ಕುರ್ ಆನ್, ತಹ್ಲೀಲ್ ಸಮರ್ಪಣೆ
Update: 2019-08-05 23:19 IST
ನರಿಂಗಾನ: ಇತ್ತೀಚೆಗೆ ನಿಧನರಾದ ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಇದರ ಸ್ಥಾಪಕ ಮರ್ಹೂಂ ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಹೆಸರಲ್ಲಿ ದುಆ ಪ್ರಾರ್ಥನಾ ಕಾರ್ಯಕ್ರಮವು ಆ.6ರಂದು ಮಧ್ಯಾಹ್ನ 12ಕ್ಕೆ ಅಲ್ ಮದೀನ ಕ್ಯಾಂಪಸಿನಲ್ಲಿ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ನೇತೃತ್ವದಲ್ಲಿ ನಡೆಯಲಿದೆ.
ಈ ಸಂದರ್ಭ ಸಾದಾತುಗಳು, ಉಲಮಾಗಳ ಸಾನಿಧ್ಯದಲ್ಲಿ ಖತಮುಲ್ ಕುರ್ ಆನ್, ತಹ್ಲೀಲ್ ಸಮರ್ಪಣೆ ನಡೆಯಲಿದೆ ಎಂದು ಸಂಸ್ಥೆಯ ಮ್ಯಾನೇಜರ್, ಉಸ್ತಾದರ ಪುತ್ರರೂ ಆಗಿರುವ ಅಬ್ದುಲ್ ಖಾದರ್ ಸಖಾಫಿ ತಿಳಿಸಿದ್ದಾರೆ.