ತೊಕ್ಕೊಟ್ಟು: ಶಾರ್ಟ್ ಸರ್ಕ್ಯೂಟ್ ನಿಂದ ಮೆಡಿಕಲ್ ಶಾಪ್ ಗೆ ಬೆಂಕಿ
Update: 2019-08-05 23:46 IST
ಉಳ್ಳಾಲ: ಭಾರೀ ಮಳೆ ಹಾಗೂ ಬಿರುಸಿನ ಗಾಳಿಗೆ ತೊಕ್ಕೊಟ್ಟು ಒಳಪೇಟೆಯಲ್ಲಿ ತೆರೆಯಲಾಗಿದ್ದ ಪ್ರಧಾನ ಮಂತ್ರಿ ಜನರಿಕ್ ಔಷಧಿ ಮಳಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಗೆ ಆಹುತಿಯಾದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಮೆಡಿಕಲ್ ಶಾಪ್ ನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಔಷಧಿಗಳು ಹಾಗೂ ಫ್ರಿಡ್ಜ್ ಮೊದಲಾದ ಶೇಖರಣಾ ವಸ್ತುಗಳು ಸುಟ್ಟು ಭಸ್ಮವಾಗಿವೆ.
ಸ್ಥಳಕ್ಕೆ ತಕ್ಷಣವೇ ಅಗ್ನಿಶಾಮಕದಳ ಕರೆಸಲಾಗಿದ್ದು ಸಿಬ್ಬಂದಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಉಳ್ಳಾಲ ಪೊಲೀಸರು ಸ್ಥಳದಲ್ಲಿ ಅಗ್ನಿಶಾಮಕದಳಕ್ಕೆ ಸಹಕರಿಸುತ್ತಿದ್ದಾರೆ. ಇದೇ ಸಂದರ್ಭ ಅಗ್ನಿಯನ್ನು ನಂದಿಸುತ್ತಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಒಬ್ಬರಿಗೆ ಔಷಧಿ ಅಂಗಡಿಯಲ್ಲಿದ್ದ ಬ್ಯಾಟರಿಯೊಂದು ಸ್ಫೋಟಗೊಂಡಿರುವ ಪರಿಣಾಮ ಮುಖಕ್ಕೆ ಗಂಭೀರ ಗಾಯಗಳಾಗಿದ್ದು ಅವರನ್ನು ಚಿಕಿತ್ಸೆಗಾಗಿ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.