×
Ad

ಬಕ್ರೀದ್ : ಸೂಕ್ತ ರಕ್ಷಣೆ ಒದಗಿಸುವಂತೆ ಮನವಿ

Update: 2019-08-06 21:37 IST

ಉಡುಪಿ, ಆ.6: ಉಡುಪಿ ಜಿಲ್ಲೆಯಾದ್ಯಂತ ಆ.12ರಂದು ಈದ್ ಉಲ್ ಅಝ್‌ಹಾ (ಬಕ್ರೀದ್)  ಆಚರಿಸಲು ಯಾವುದೇ ತೊಂದರೆ ಆಗದಂತೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿ ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ನಿಯೋಗ ಇಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿಯವರಿಗೆ ಮನವಿ ಸಲ್ಲಿಸಿತು.

 ಹಬ್ಬಕ್ಕೆ ಪ್ರಾಣಿಗಳನ್ನು ಸಾಗಿಸಲು ಅಡಚಣೆಯಾಗದಂತೆ ಮತ್ತು ಸುಗಮವಾಗಿ ಹಬ್ಬ ಆಚರಿಸಲು ಅನುಕೂಲವಾಗುವಂತೆ ಹಾಗೂ ಸೂಕ್ತ ರಕ್ಷಣೆ ನೀಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಹಾಜಿ ಕೆ.ಪಿ.ಇಬ್ರಾಹಿಂ, ಉಪಾಧ್ಯಕ್ಷರು ಹಾಗೂ ಸದಸ್ಯರು, ವಕ್ಫ್ ಅಧಿಕಾರಿಯವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News