×
Ad

ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಲ್ಲಿ ಮಣ್ಣು ಕುಸಿತ

Update: 2019-08-06 22:28 IST

ಮಂಗಳೂರು, ಆ.6: ಕರಾವಳಿಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಮಂಗಳೂರು ನಗರದ ಹೊರವಲಯ ಪಚ್ಚನಾಡಿಯಲ್ಲಿನ ಡಂಪಿಂಗ್ ಯಾರ್ಡ್‌ನಲ್ಲಿ ತ್ಯಾಜ್ಯ ಗುಡ್ಡೆಯು ಕೆಳಗೆ ಸರಿದಿದ್ದು, ಮಣ್ಣು ಕುಸಿತ ಸಂಭವಿಸಿದೆ. ಮಣ್ಣು ಕುಸಿತದಿಂದ ಸ್ಥಳೀಯರಲ್ಲಿ ಭೂಕುಸಿತದ ಭೀತಿ ಉಂಟಾಗಿದೆ.

ಪಚ್ಚನಾಡಿಯ ಡಂಪಿಂಗ್ ಯಾರ್ಡ್‌ಗೆ ಇತ್ತೀಚೆಗೆ ಬೆಂಕಿ ಬಿದ್ದು ವಾಸನೆಯಿಂದ ಸ್ಥಳೀಯವಾಗಿ ಆತಂಕ ಸೃಷ್ಟಿಯಾಗಿತ್ತು. ಬೆಂಕಿ ವ್ಯಾಪಿಸದಂತೆ ಅಮದು ತ್ಯಾಜ್ಯ ರಾಶಿಗೆ ಮಣ್ಣು ಸುರಿಯಲಾಗಿತ್ತು. ಆದರೆ, ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಮಣ್ಣಿನ ಮೇಲೆ ಮಳೆನೀರು ನಿಂತು ತ್ಯಾಜ್ಯ ರಾಶಿ ಸರಿಯಲು ಆರಂಭಿಸಿದೆ. ಸ್ಥಳೀಯರನ್ನು ಆತಂಕ್ಕೀಡು ಮಾಡಿದೆ.

ಡಂಪಿಂಗ್ ಯಾರ್ಡ್ ಸಮೀಪದ ನಿವಾಸಿಯೊಬ್ಬರ ತೋಟದವರೆಗೂ ತ್ಯಾಜ್ಯ ಗುಡ್ಡೆಯು ಸರಿದಿದೆ. ಕಸದ ರಾಶಿ, ತ್ಯಾಜ್ಯ ಹಾಗೂ ಮಳೆ ನೀರು ಜತೆಯಾಗಿ ಹರಿದ ಪರಿಣಾಮ ಇಲ್ಲಿ ದುರ್ನಾತ ತುಂಬಿಕೊಂಡಿದೆ. ನಿರಂತರ ಸುರಿಯುತ್ತಿರುವ ಮಳೆ ಇದೇ ರೀರಿಯ ಮುಂದುವರಿದಲ್ಲಿ ಇನ್ನಷ್ಟು ಅವಘಡಗಳು ಸಂಭವಿಸುವ ಸಾಧ್ಯತೆ ಇದೆ ಎನ್ನುವುದು ಸ್ಥಳೀಯ ಆತಂಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News