ಮಂಗಳೂರು: ಮಲಗಿದ್ದಲೇ ವ್ಯಕ್ತಿ ಮೃತ್ಯು
Update: 2019-08-06 22:29 IST
ಮಂಗಳೂರು, ಆ.6: ನಗರದ ಹೊಟೇಲ್‌ವೊಂದರ ಸಿಬ್ಬಂದಿ ರೂಮ್‌ನಲ್ಲಿ ಮಲಗಿದ್ದಲೇ ಮೃತಪಟ್ಟಿದ್ದು, ಈ ಬಗ್ಗೆ ಬರ್ಕೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾರ್ಕಳ ಬೆಳ್ಮಣ್ಣು ನಿವಾಸಿ ಪ್ರದೀಪ್ (22) ಮೃತಪಟ್ಟವರು.
ಇವರು ಆ.5ರಂದು ಬೆಳಗ್ಗೆ ಬಲ್ಲಾಳ್‌ಭಾಗ್‌ನಲ್ಲಿರುವ ರೂಮ್‌ನಲ್ಲಿ ಮಲಗಿದ್ದರು. ಸಂಜೆಯಾದರೂ ಇವರು ಎದ್ದೇಳದ ಕಾರಣ ಇನ್ನೊಬ್ಬ ಸಿಬ್ಬಂದಿ ಬಂದು ಎಬ್ಬಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಪ್ರದೀಪ್ ಅವರು ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಪರೀಕ್ಷಿಸಿದ ವೈದ್ಯರು ಪ್ರದೀಪ್ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.