×
Ad

ಭಾರತದ ಸೈನಿಕರಲ್ಲಿ ಜಾತಿ, ಧರ್ಮ ಇಲ್ಲ: ನಿವೃತ್ತ ಸೇನಾನಿ ಮೊಹಿದ್ದೀನ್ ಪಿಲಾರ್

Update: 2019-08-06 22:31 IST

ಉಳ್ಳಾಲ: ಭಾರತದ ಸೈನಿಕರಾಗಿ  ಸೇವೆ ಸಲ್ಲಿಸುವವರಲ್ಲಿ ಜಾತಿ,ಧರ್ಮ ಇರುವುದಿಲ್ಲ. ಬಡವ ಶ್ರೀಮಂತ ಬೇಧ ಭಾವ ಇರುವುದಿಲ್ಲ. ಅಪಾರ ಪ್ರೀತಿ, ವಿಶ್ವಾಸ ಈ ಸಂದರ್ಭದಲ್ಲಿ ಬೆಳೆಯುತ್ತದೆ. ದೇಶದ ಮೇಲೆ ಮಹತ್ತರ ಅಭಿಮಾನ ಪ್ರೀತಿ ಬೆಳೆದು ಬರುತ್ತದೆ. ಸೈನಿಕರ ಸೇವೆಯನ್ನು ನಾವೆಂದಿಗೂ ಕಡೆಗಣನೆ ಮಾಡಬಾರದು ಎಂದು ನಿವೃತ್ತ ಸೇನಾನಿ ಮೊಹಿದ್ದೀನ್  ಪಿಲಾರ್ ಹೇಳಿದರು.

ಅವರು ಸೋಮವಾರ ಬಬ್ಬುಕಟ್ಟೆ ಅಲ್‍ ಫುರ್ಕಾನ್ ಅರೆಬಿಕ್ ಇನ್‍ಸ್ಟಿಟ್ಯೂಟ್ ಸಭಾಂಗಣದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ನಡೆದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪಿ.ಎ. ಫಾರ್ಮಸಿ ಕಾಲೇಜಿನ ಪ್ರೊಫೆಸರ್ ಡಾ. ಮುಹಮ್ಮದ್ ಮುಬೀನ್ ಧಾರ್ಮಿಕ ಉಪನ್ಯಾಸ ನೀಡಿದರು. ಅಲ್‍ಫುರ್ಕಾನ್ ಅರೆಬಿಕ್ ಇನ್ಸಿಟ್ಯೂಟ್‍ನ ಅಧ್ಯಕ್ಷ ಇಸ್ಹಾಕ್ ಹಸನ್ ಉಪಸ್ಥಿತರಿದ್ದರು. ಜಮಾಅತೆ ಇಸ್ಲಾಮಿ ಹಿಂದ್ ಉಪಾಧ್ಯಕ್ಷ ಸ್ವಾಗತಿಸಿದರು. ಅಲ್‍ಫುರ್ಕಾನ್ ಇನ್ಸಿಟ್ಯೂಟ್‍ನ ಅಧ್ಯಾಪಕ ಮುಹಮ್ಮದ್ ಮುಬೀನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News