ಸಾಲಿಹಾತ್: ವಿಜ್ಞಾನ ಮಾದರಿ ತಯಾರಿ ಕಾರ್ಯಗಾರ
ಉಡುಪಿ, ಆ.7: ತೋನ್ಸೆ ಹೂಡೆ ಸಾಲಿಹಾತ್ ಶಾಲೆಯಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಯುವ ವಿಜ್ಞಾನ ಮೇಳದ ಪೂರ್ವ ತಯಾರಿಯಾಗಿ ಬ್ರಹ್ಮಾವರ, ಉಡುಪಿ ಹಾಗೂ ಕಾಪು ಶೈಕ್ಷಣಿಕ ವಲಯದ ಶಿಕ್ಷಕರಿಗೆ ವಿಜ್ಞಾನ ಮಾದರಿ ತಯಾರಿ ಕಾರ್ಯಗಾರ ಇತ್ತೀಚಿಗೆ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಚೆನ್ನೈ ದಿ ನ್ಯೂ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ಎಂ.ಎಂ.ಎ.ನಜರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅನ್ವೇಷಣೆ ಮನೋಭಾವ ಬೆಳೆಸಬೇಕು. ಪ್ರಸಕ್ತ ಸಮಸ್ಯೆಗಳ ಪರಿಹಾರೋಪಾಯಗಳನ್ನು ಕಂಡು ಹಿಡಿಯಲು ಪ್ರೇರೆಪಿಸಬೇಕು ಹಾಗೂ ಸದಾ ಕ್ರಿಯಾತ್ಮಕವಾಗಿ ತೊಡಗಿಸಿ ಕೊಳ್ಳುವಂತೆ ಶಿಕ್ಷಕರು ಪ್ರಮುಖ ಪಾತ್ರವಹಿಸಬೇಕು ಎಂದು ಹೇಳಿದರು.
ರಾಯಚೂರು ಎ.ಜೆ.ಅಕಾಡೆಮಿಯ ನಿರ್ದೇಶಕ ಮುಹಮ್ಮದ್ ಅಬ್ದುಲ್ಲಾ ಜಾವಿದ್ ವಿಜ್ಞಾನ ಮಾದರಿಯ ಕುರಿತು ಮಾರ್ಗದರ್ಶನ ನೀಡಿದರು. ಶಿಕ್ಷಕಿ ಸುರಯ್ಯ ಪ್ರಾರ್ಥನೆಗೈದರು. ವೇದಿಕೆಯಲ್ಲಿ ಶಾಲಾ ಆಡಳಿತಾಧಿಕಾರಿ ಅಸ್ಲಂ ಹೈಕಾಡಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಸಮೀನ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಶ್ರೀಮತಿ ಸುನಂದಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.