ಫಾದರ್ ಮುಲ್ಲರ್ಸ್‌ನಿಂದ ‘ಆರೋಗ್ಯವಂತ ಶಿಶು ಸ್ಪರ್ಧೆ’
ಮಂಗಳೂರು, ಆ.7: ನಗರದ ಹೊರವಲಯ ಬಜ್ಪೆಯಲ್ಲಿ ಫಾದರ್ ಮುಲ್ಲರ್ಸ್ ಗ್ರಾಮೀಣ ಆರೋಗ್ಯ ತರಬೇತಿ ಕೇಂದ್ರದಲ್ಲಿ ಬುಧವಾರ ನಡೆದ ಸ್ತನ್ಯಪಾನ ಸಪ್ತಾಹ ಸಮಾರೋಪ ಕಾರ್ಯಕ್ರಮದಲ್ಲಿ ಒಂದು ವರ್ಷದ ಒಳಗಿನ ಮಕ್ಕಳಿಗೆ ‘ಆರೋಗ್ಯವಂತ ಶಿಶು ಸ್ಪರ್ಧೆ’ ಆಯೋಜಿಸಲಾಯಿತು.
ಡಾ.ಆನಾಗ ತಾಯಿಯ ಎದೆ ಹಾಲಿನ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಫಾದರ್ ಮುಲ್ಲರ್ಸ್ ಗ್ರಾಮೀಣ ಆರೋಗ್ಯ ತರಬೇತಿ ಕೇಂದ್ರದ ವೈದ್ಯಾಧಿಕಾರಿ ಡಾ.ಜೆಸ್ಸಿ ಡಿಸೋಜ ತಾಯಿ ಹಾಗೂ ಮಗುವಿನ ಆರೈಕೆ ಸೇರಿದಂತೆ ಡೆಂಗ್ ಜ್ವರದ ಮಾಹಿತಿ ನೀಡಿ, ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಲಹೆ ನೀಡಿದರು.
ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಮಕ್ಕಳ ತಜ್ಞೆ ಡಾ.ಕೆ.ಜೊಹಾರಾ ಪರ್ವಿನ್, ಪ್ರಾಧ್ಯಾಪಕ ಡಾ.ಸೌರಭ್ ಕುಮಾರ್ ಮಕ್ಕಳ ಮೌಲ್ಯಮಾಪನ ನಡೆಸಿದರು.
ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಅತಿಥಿಗಳಾಗಿ ರಾಘವ್ ಕಾಮತ್ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ 30 ಮಕ್ಕಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸ್ಥಳಿಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಡಾ.ಸೌರಭ್‌ಕುಮಾರ್ ಸ್ವಾಗತಿಸಿದರು. ಇಝಾಬೆಲ್ಲ ವಂದಿಸಿದರು. ಡೆಲ್ಸನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.