×
Ad

ಪಿತ್ತಜನಕಾಂಗದ ಕ್ಯಾನ್ಸರ್ ನಿಯಂತ್ರಿಸಬಹುದು: ಡಾ.ಕೀರ್ತಿ ಶೆಟ್ಟಿ

Update: 2019-08-07 20:25 IST

ಉಳ್ಳಾಲ: ಪಿತ್ತಜನಕಾಂಗದ ಕ್ಯಾನ್ಸರ್ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಮತ್ತು ಧನಾತ್ಮಕವಾಗಿ ಚಿಕಿತ್ಸೆ ನೀಡಬಹುದು ಎಂದು ವಾಷಿಂಗ್ಟನ್ ಡಿ.ಸಿ.ಯ ಮೇರಿಲ್ಯಾಂಡ್ ವಿಶ್ವವಿದ್ಯಾನಿಲಯದ ನಿರ್ದೇಶಕಿ ಹಾಗೂ ಮೆಡಿಸಿನ್ ವಿಭಾಗದ ಪ್ರಾಧ್ಯಾಪಕಿ ಡಾ.ಕೀರ್ತಿ ಶೆಟ್ಟಿ ಅಭಿಪ್ರಾಯಪಟ್ಟರು. 

ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಮೆಡಿಸಿನ್ ವಿಭಾಗದ ಆಶ್ರಯದಲ್ಲಿ ಪಿತ್ತಜನಕಾಂಗ ಕ್ಯಾನ್ಸರ್ ರೋಗ ಪರಿಣಾಮಕಾರಿ ಚಿಕಿತ್ಸೆ ವಿಚಾರದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿಯಂತ್ರಿತ ಕಣ್ಗಾವಲು, ಆರಂಭಿಕ ರೋಗನಿರ್ಣಯ ಮತ್ತು ಖಚಿತವಾದ ಚಿಕಿತ್ಸೆಯಿಂದ ಲಿವರ್ ಕ್ಯಾನ್ಸರ್ ಅನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಮತ್ತು ಧನಾತ್ಮಕವಾಗಿ ಚಿಕಿತ್ಸೆ ನೀಡಬಹುದು ಇದನ್ನು ಅಮೇರಿಕನ್ ಹೆಪಾಟಿಕ್ ಕ್ಯಾನ್ಸರ್ ಅಸೋಸಿಯೇಷನ್‍ನಂತಹ ಅಂತರರಾಷ್ಟ್ರೀಯ ವೈಜ್ಞಾನಿಕ ಸಂಸ್ಥೆಗಳು ದೃಡೀಕರಿಸಿದ್ದು ಈ ನಿಟ್ಟಿನಲ್ಲಿ ಸಂಶೋಧನೆಗಳನ್ನು ನಡೆಸಿ ಯಶಸ್ವಿಯಾಗಿದೆ ಎಂದರು.

 ನಿಟ್ಟೆ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿ ಡಾ. ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಆಡಳಿತ ವಿಭಾಗದ ವೈಸ್ ಡೀನ್ ಡಾ. ಜಯಪ್ರಕಾಶ್ ಶೆಟ್ಟಿ, ಅಕಾಡೆಮಿಕ್ಸ್ ವೈಸ್ ಡೀನ್ ಡಾ.ಅಮೃತ್ ಮಿರಾಜ್‍ಕರ್, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಮೇಜರ್ ಡಾ.ಶಿವಕುಮಾರ್ ಹಿರೇಮಠ್, ಸರ್ಜರಿ ವಿಭಾಗದ ಮುಖ್ಯಸ್ಥ ಡಾ.ರಾಜಶೇಖರ್ ಮೋಹನ್ ಉಪಸ್ಥಿತರಿದ್ದರು.

ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ರಾಘವ ಶರ್ಮಾ ಸ್ವಾಗತಿಸಿದರು. ಡಾ. ಅದಿತಿ ವಂದಿಸಿದರು. ಡಾ.ರೂಹಿ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News