ಜೂಜಾಟ: ನಾಲ್ವರು ಆರೋಪಿಗಳು ಬಂಧನ
ಮಂಗಳೂರು, ಆ.7: ನಗರದ ಪಂಪ್‌ವೆಲ್ ವೈನ್‌ಶಾಪ್ ಬಳಿ ಜೂಜಾಡುತ್ತಿದ್ದ ನಾಲ್ವರನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬುಧವಾರ ಬಂಧಿಸಿ ಅವರಿಂದ 13,300 ರೂ. ವೌಲ್ಯದ ಸೊತ್ತು ವಶಪಡಿಸಿಕೊಂಡಿದ್ದಾರೆ.
ಜಪ್ಪಿನಮೊಗರು ತಂದೊಳಿಗೆ ನಿವಾಸಿ ಶೈಲೇಶ್ (33), ನೇರಳಕಟ್ಟೆ ಕಂಪಹೌಸ್ ಜಯರಾಮ (40), ಲಾಯಿಲ ಗ್ರಾಮದ ಕರ್ನೋಡಿ ಮನೆ ರಮೇಶ್ (28), ಎಕ್ಕೂರು ಗುಡ್ಡ ನಿವಾಸಿ ಸುಕೇಶ್ (36) ಬಂಧಿತರು. ಶೈಲೇಶ್ ಇತರ ಮೂವರಿಂದ ಹಣ ಸಂಗ್ರಹಿಸಿ ಜೂಜಾಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಬಂಧಿತರಿಂದ ಕೃತ್ಯಕ್ಕೆ ಉಪಯೋಗಿಸಿದ ಮೂರು ಮೊಬೈಲ್, 4,300 ರೂ. ಸೇರಿಂದತೆ ಒಟ್ಟು 13,300 ರೂ. ಮೌಲ್ಯದ ಸೊತ್ತು ವಶಪಡಿಸಿಕೊಂಡಿದ್ದಾರೆ.
ಡಿಸಿಪಿಗಳಾದ ಹನುಮಂತರಾಯ ಮತ್ತು ಲಕ್ಷ್ಮೀ ಗಣೇಶ್ ಹಾಗೂ ಎಸಿಪಿ ಕೋದಂಡರಾಮ ಮಾರ್ಗದರ್ಶನದಲ್ಲಿ ಕಂಕನಾಡಿ ನಗರ ಠಾಣೆ ಇನ್‌ಸ್ಪೆಕ್ಟರ್ ಅಶೋಕ ಪಿ. ನೇತೃತ್ವದದಲ್ಲಿ ಉಪ ನಿರೀಕ್ಷಕ ಪ್ರದೀಪ್ ಟಿ.ಆರ್. ಮತ್ತು ಠಾಣಾ ಸಿಬ್ಬಂದಿ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.