ಕೇರಳ: ಅತ್ಯಾಚಾರ ಪ್ರಕರಣ ಪ್ರತಿಭಟನೆಯಲ್ಲಿ ಭಾಗಿಯಾದ ಕ್ರೈಸ್ತ ಸನ್ಯಾಸಿನಿಯ ವಜಾ

Update: 2019-08-07 18:00 GMT
photo: ANI

ತಿರುವನಂತಪು, ಆ. 7: ಅತ್ಯಾಚಾರ ಆರೋಪಿ ಫ್ರಾಂಕೊ ಮುಲಕ್ಕಲ್ ವಿರುದ್ಧ ಕಳೆದ ವರ್ಷ ನಡೆಸಲಾದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕೇರಳದ ಕ್ರೈಸ್ತ ಸನ್ಯಾಸಿನಿ ಲೂಸಿ ಕಾಲಪ್ಪುರ ಅವರನ್ನು ‘ಜೀವನಶೈಲಿ ಮೂಲಕ ಸಮರ್ಪಕ ನಿಯಮದ ಉಲ್ಲಂಘನೆ’ ನಡೆಸಲಾಗಿದೆ ಎಂಬ ಕಾರಣವೊಡ್ಡಿ ರೋಮನ್ ಕೆಥೋಲಿಕ್ ಚರ್ಚ್‌ನ ಅಡಿಯಲ್ಲಿ ಬರುವ ‘ಕಾಂಗ್ರಗೇಷನ್’ (ಸಭೆ) ನಿಂದ ವಜಾಗೊಳಿಸಲಾಗಿದೆ.

 ಕಾರು ಖರೀದಿ, ಅದಕ್ಕೆ ಸಾಲ ಪಡೆದಿರುವುದು, ಚಾಲನಾ ಪರವಾನಿಗೆ ಪಡೆದುಕೊಂಡಿರುವುದು ಹಾಗೂ ಕವನಗಳನ್ನು ಪ್ರಕಟಿಸಿರುವ ಬಗ್ಗೆ ಕಾಲಪ್ಪುರ ‘ತೃಪ್ತಿಕರ ವಿವರಣೆ’ ನೀಡಲು ವಿಫಲರಾಗಿದ್ದಾರೆ ಎಂದು ಫ್ರಾನ್ಸಿಸ್ಕನ್ ಕ್ಲಾರಿಸ್ಟ್ ಕಾಂಗ್ರಗೇಷನ್‌ನ ಪತ್ರ ಹೇಳಿದೆ. ಈ ‘ಕಾಂಗ್ರಗೇಷನ್’ ರೋಮನ್ ಕೆಥೋಲಿಕ್ ಚರ್ಚ್‌ನ ಅಡಿಯಲ್ಲಿ ಬರುತ್ತದೆ. ಈ ಪತ್ರ ನೀಡಿದ ‘ಕಾಂಗ್ರಗೇಷನ್’ ನ ಮುಖ್ಯಸ್ಥ ಆ್ಯನ್ ಜೋಸೆಫ್, ಕಾಲಪ್ಪುರ ಅವರಿಗೆ ಅಧಿಕೃತ ಎಚ್ಚರಿಕೆ ನೀಡಲಾಗಿದೆ. ಆದರೆ, ಅವರು ‘ಅಗತ್ಯವಿರುವ ಪಶ್ಚಾತಾಪ’ ತೋರಿಸಿಲ್ಲ ಎಂದಿದ್ದಾರೆ. ಕಾಲಪ್ಪುರ ಅವರನ್ನು ವಜಾಗೊಳಿಸಿದ ನಿರ್ಧಾರ ಮೇ 11ರಂದು ನಡೆದ ‘ಕಾಂಗ್ರಗೇಷನ್’ (ಸಭೆ)ನ ಪ್ರಧಾನ ಮಂಡಳಿ ಸಭೆಯಲ್ಲಿ ಏಕಪಕ್ಷೀಯವಾಗಿ ತೆಗೆದುಕೊಳ್ಳಲಾಗಿತ್ತು. ಇದಕ್ಕೆ ವ್ಯಾಟಿಕನ್‌ನಲ್ಲಿರುವ ಓರಿಯಂಟಲ್ ಚರ್ಚ್‌ಗಳ ‘ಕಾಂಗ್ರಗೇಷನ್’ ಒಪ್ಪಿಗೆ ನೀಡಿತ್ತು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News