ನೊಬೆಲ್ ವಿಜೇತ ಮೊದಲ ಕರಿಯ ಮಹಿಳೆ ಟೋನಿ ಮೊರಿಸನ್ ನಿಧನ

Update: 2019-08-07 17:29 GMT

ನ್ಯೂಯಾರ್ಕ್, ಆ. 7: ಅಮೆರಿಕದ ನೊಬೆಲ್ ಪ್ರಶಸ್ತಿ ವಿಜೇತೆ ಹಾಗೂ ಆಧುನಿಕ ಸಾಹಿತ್ಯದ ಮೊದಲಿಗರಲ್ಲಿ ಒಬ್ಬರಾದ ಸಾಹಿತಿ ಟೋನಿ ಮೊರಿಸನ್ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.

 ‘ಬಿಲವ್ಡ್’ ಮತ್ತು ‘ಸಾಂಗ್ ಆಫ್ ಸೋಲೊಮನ್’ ಮುಂತಾದ ಕೃತಿಗಳಲ್ಲಿನ ಅವರ ಕಲ್ಪನಾ ಸಾಮರ್ಥ್ಯವು ಜನರನ್ನು ಅಚ್ಚರಿಗೀಡುಮಾಡಿತ್ತು.

ಮೊರಿಸನ್ ಸೋಮವಾರ ರಾತ್ರಿ ನ್ಯೂಯಾರ್ಕ್‌ನ ಮೊಂಟೆಫಿಯೋರ್ ಮೆಡಿಕಲ್ ಸೆಂಟರ್‌ನಲ್ಲಿ ನಿಧನರಾದರು ಎಂದು ಪ್ರಕಾಶಕ ಆಲ್ಫ್ರೆಡ್ ಎ. ನಾಫ್ ಪ್ರಕಟಿಸಿದ್ದಾರೆ. ಅಲ್ಪ ಕಾಲದ ಅಸೌಖ್ಯದ ಬಳಿಕ ಸಾಹಿತಿ ಕೊನೆಯುಸಿರೆಳೆದರು ಎಂದು ಮೊರಿಸನ್‌ರ ಕುಟುಂಬವು ನಾಫ್ ಮೂಲಕ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ಅವರ ಮೊದಲ ಕಾದಂಬರಿ ‘ದ ಬ್ಲೂಯೆಸ್ಟ್ ಐ’ ಪ್ರಕಟಗೊಂಡಾಗ ಅವರಿಗೆ ಸುಮಾರು 40 ವರ್ಷ. 1993ರಲ್ಲಿ ತನ್ನ ಅರ್ವತ್ತರ ಪ್ರಾಯದಲ್ಲಿ ಅವರು ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ಪಡೆದರು. ಅವರು ಆ ವೇಳೆಗೆ ಕೇವಲ ಆರು ಕಾದಂಬರಿಗಳನ್ನಷ್ಟೇ ಬರೆದಿದ್ದರು. ನೊಬೆಲ್ ಸಾಹಿತ್ಯ ಪ್ರಶಸ್ತಿ ಪಡೆದ ಮೊದಲ ಕರಿಯ ಮಹಿಳೆ ಅವರಾಗಿದ್ದಾರೆ.

 2012ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಟೋನಿ ಮೊರಿಸನ್‌ಗೆ ‘ಪ್ರೆಸಿಡೆನ್ಶಿಯಲ್ ಮೆಡಲ್ ಆಫ್ ಫ್ರೀಡಂ’ ಪ್ರದಾನ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News