ಮಂಗಳೂರು: ಇಬ್ಬರು ಯುವಕರು ನಾಪತ್ತೆ
ಮಂಗಳೂರು, ಆ.7: ಸುರತ್ಕಲ್ ಪೊಲೀಸ್ ಠಾಣೆಯ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಯುವಕರು ನಾಪತ್ತೆಯಾಗಿದ್ದಾರೆ.
ಮಂಗಳೂರು ತಾಲೂಕಿನ ಕುತ್ತೆತ್ತೂರು ಕೊಡಂಗೆ ನಿವಾಸಿ ಮೋಹನ್‌ದಾಸ್ ಶೆಟ್ಟಿ (30) ಎಂಬವರು ಜು.20ರಂದು ನಾಪತ್ತೆಯಾಗಿದ್ದಾರೆ.
ಚಹರೆ: ಎತ್ತರ 5.4 ಅಡಿ, ಬಿಳಿ ಮೈಬಣ್ಣ, ಸಾಧಾರಣ ಶರೀರ, ಕಪ್ಪು ಗುಂಗುರು ಕೂದಲು, ಕಪ್ಪು ಮೀಸೆ, ಕುತ್ತಿಗೆಯ ಬಲ ಬದಿಯಲ್ಲಿ ಕಪ್ಪು ಮಚ್ಚೆ, ಬಲಕೋಲು ಕಾಲಿನಲ್ಲಿ ಹಳೇ ಗಾಯದ ಗುರುತು, ಧರಿಸಿದ ಬಟ್ಟೆ ಜೀನ್ಸ್ ಪ್ಯಾಂಟ್ ಮತ್ತು ಟೀ ಶರ್ಟ್ ಧರಿಸಿದ್ದರು. ಕನ್ನಡ, ತುಳು, ಹಿಂದಿ ಭಾಷೆ ಮಾತನಾಡುತ್ತಾರೆ.
ಮಂಗಳೂರು ತಾಲೂಕಿನ ಶಿವಶಕ್ತಿ ನಗರ ನಿವಾಸಿ ನಿತೀಶ್‌ಕುಮಾರ್ (19) ಎಂಬವರು ಜೂ.29ರಂದು ಕಾಣೆಯಾಗಿದ್ದಾರೆ ಎಂದು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದೆ.
ಚಹರೆ: ಎತ್ತರ 5.5 ಅಡಿ, ಎಣ್ಣೆ ಕಪ್ಪು ಮೈಬಣ್ಣ, ಎಡಕಾಲಿನ ಹೆಬ್ಬೆರಳಿನ ಮೇಲೆ ‘ಯು’ ಆಕಾರದ ಕಪ್ಪು ಮಚ್ಚೆ ಇದೆ. ಎಡಗೈಯಲ್ಲಿ ‘ಆಂಜನೇಯ’ ದೇವರ ಹಚ್ಚೆ ಇದೆ. ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆ ಮಾತನಾಡುತ್ತಾರೆ.
ಕಾಣೆಯಾದ ಯುವಕರು ಗುರುತು ಪತ್ತೆಯಾದಲ್ಲಿ ಸುರತ್ಕಲ್ ಠಾಣೆ ದೂ. ಸಂ.: 0824- 2220540, 9480802345, 9480805360ನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.