×
Ad

ಬೆಂಗಳೂರು: ಆ.23ರಿಂದ ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಉದ್ಯಮದ ಪ್ರದರ್ಶನ

Update: 2019-08-07 23:02 IST

ಮಂಗಳೂರು, ಆ. 7: ಕರ್ನಾಟಕ ರಾಜ್ಯ ಪ್ಲಾಸ್ಟಿಕ್ ಎಸೋಸಿಯೇಶನ್ ಮತ್ತು ದೇಶದ ದಕ್ಷಿಣ ಪ್ಲಾಸ್ಟಿಕ್ ಎಸೋಸಿಯೇಶನ್ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ಆ. 23ರಿಂದ 25ರವರೆಗೆ ನಡೆಯಲಿರುವ ಐಪಿಎಲ್‌ಎಕ್ಸ್ -2019, ಅಂತರಾಷ್ಟ್ರೀಯ ಪ್ಲಾಸ್ಟಿಕ್ ಉದ್ಯಮದ ಪ್ರದರ್ಶನ ಕಾರ್ಯಕ್ರಮಕ್ಕೆ ಆ. 2ರಂದು ನಗರದ ಓಶಿಯನ್ ಪರ್ಲ್ ಹೊಟೀಲ್ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.

ಮಂಗಳೂರು ಪ್ಲಾಸ್ಟಿಕ್‌ನಲ್ಲಿ ಹೂಡಿಕೆಯ ಅವಕಾಶಗಳ ಬಗ್ಗೆ ತಾಂತ್ರಿಕ ವಿಚಾರಗೋಷ್ಠಿಯಲ್ಲಿ ಒಎನ್‌ಜಿಸಿ ಎಂಆರ್‌ಪಿಲ್‌ನ ಸಿಜಿಎಂ (ಪಿ.ಇಮತ್ತು ಪಿ.ಪಿ.ವಿಭಾಗ) ನಂದಕುಮಾರ್ ಮಾಹಿತಿ ನೀಡಿದರು.

ಸಮಾರಂಭದಲ್ಲಿ ಕೆಎಸ್ ಐಎ ಅಧ್ಯಕ್ಷ ಗೌರವ್ ಹೆಗ್ಡೆ,ಕೆಎಸ್‌ಪಿಎ ಅಧ್ಯಕ್ಷ ವಿಜಯ ಕುಮಾರ್,ಐಪಿಎಲ್‌ಎಕ್ಸ್-2019ರ ಸಂಚಾಲಕ ಹರಿರಾಮ್ ತಕ್ಕರ್,ಸಿಎಂಎಂಟಿಎ ಅಧ್ಯಕ್ಷ ಬಿ.ಎ.ನಝೀರ್, ಕೆಪಿಎಂಎ ಅಧ್ಯಕ್ಷ ಬಾಲಕೃಷ್ಣ ಭಟ್ ಕಾಕುಂಜೆ, ಕೆಎಸ್‌ಪಿಎ ಪ್ರಧಾನ ಕಾರ್ಯದರ್ಶಿ ಸುರೇಶ್ ಸಾಗರ್, ಗೋಪಾಲಕೃಷ್ಣ, ಸಿಎಂಎಂಟಿಎ ಪ್ರಧಾನ ಕಾರ್ಯದರ್ಶಿ ಬಿ.ಎ.ಇಕ್ಬಾಲ್, ಕೆ.ಎಸ್.ಪಿ.ಎ ಕಾರ್ಯದರ್ಶಿ ಸುರೇಶ್ ಕರ್ಕೇರಾ, ಲೆಕ್ಕಪರಿಶೋಧಕ ಎಸ್.ಎಸ್.ನಾಯಕ್ ಮೊದಲಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News