ಮೂಡುಬಿದಿರೆಯ ಯುವಕ ತಮಿಳ್ನಾಡಿನಲ್ಲಿ ನಾಪತ್ತೆ

Update: 2019-08-07 17:34 GMT

ಮೂಡುಬಿದಿರೆ: ತಮಿಳ್ನಾಡಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂಡುಬಿದಿರೆಯ ಯುವಕನೋರ್ವ ಕಾಣೆಯಾದ ಬಗ್ಗೆ ವರದಿಯಾಗಿದೆ.

ಕಾಣೆಯಾದ ಯುವಕ ಮೂಡುಬಿದಿರೆ ಹುಡ್ಕೊ ಕಾಲನಿಯ ಮುಹ್ಮದ್ ಆಲಿ ಅವರ ಮಗ ಶಮೀರ್ ಅಹ್ಮದ್ (24)ಎಂದು ತಿಳಿದುಬಂದಿದೆ.

ಮಾನಸಿಕ ಅಸ್ವಸ್ಥನಾಗಿದ್ದ ಈತನನ್ನು ಈತನ ತಂದೆ ತಮಿಳ್ನಾಡಿನ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದರು. ಸ್ವಲ್ಪ ದಿನಗಳ ಬಳಿಕ ತಂದೆ ಊರಿಗೆ ಹೋಗಿ ಬರುವುದಾಗಿ ತಿಳಿಸಿ ಮೂಡುಬಿದಿರೆಗೆ ಬಂದಿದ್ದರು. ಈ ವೇಳೆ ಆಸ್ಪತ್ರೆಯಿಂದ ಶಮೀರ್ ನಾಪತ್ತೆಯಾದ ಬಗ್ಗೆ ಮಾಹಿತಿ ಬಂದಿತ್ತು. ಮಗನಿಗೆ ಹುಡುಕಾಡಿದರು ಪತ್ತೆಯಾಗಿಲ್ಲ. ಈತನ ಪತ್ತೆಗೆ ನೆರವಾಗುವಂತೆ ಪೋಷಕರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News