ಮೂಡುಬಿದಿರೆ: ಮೊಸರುಕುಡಿಕೆ ಶ್ರೀಕೃಷ್ಣ ಖ್ಯಾತಿಯ ದಿವಾಕರ ಕುಲಾಲ್ ನಿಧನ

Update: 2019-08-07 17:42 GMT

ಮೂಡುಬಿದಿರೆ: ಇಲ್ಲಿನ ಯಕ್ಷಗಾನೀಯ ಮೊಸರು ಕುಡಿಕೆ ಉತ್ಸವದ ಶ್ರೀ ಕೃಷ್ಣ ವೇಷಧಾರಿಯಾಗಿದ್ದ ಮಳಲಿಯ ದಿವಾಕರ ಕುಲಾಲ್ (50 ) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ನಿಧನ ಹೊಂದಿದರು. ಅವರು ಪುತ್ರಿಯನ್ನು ಅಗಲಿದ್ದಾರೆ. ವೃತ್ತಿಯಲ್ಲಿ  ಮೆಕ್ಯಾನಿಕ್ ಆಗಿದ್ದರು.  

ಮೂಡುಬಿದಿರೆಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಶತಮಾನದ ಇತಿಹಾಸವಿರುವ ಯಕ್ಷಗಾನೀಯ ಹಿಮ್ಮೇಳದ ಖ್ಯಾತಿಯ ಅಪರೂಪದ ವಿಶಿಷ್ಠ ಮೊಸರು ಕುಡಿಕೆ ಉತ್ಸವದಲ್ಲಿ ಶ್ರೀ ಕೃಷ್ಣ ವೇಷಧಾರಿಯಾಗಿ 27 ವರ್ಷಗಳ ಕಾಲ ಅವರು ಸೇವೆ ಸಲ್ಲಿಸಿದ್ದಾರೆ.

ಸಂತಾಪ

ದಿವಾಕರ್ ಅವರ ಅಕಾಲಿಕ ನಿಧನಕ್ಕೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಗುರುಪ್ರಸಾದ್ ಹೊಳ್ಳ , ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್‍ನ ಸಂಚಾಲಕ ಸಂತೋಷ್ ಕುಮಾರ್, ಅಧ್ಯಕ್ಷ ಗಣೇಶ ರಾವ್ ಸಹಿತ ಪದಾಧಿಕಾರಿಗಳು, ಸಂತಾಪ ವ್ಯಕ್ತಪಡಿಸಿದ್ದಾರೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News