ಉಪ್ಪಿನಂಗಡಿ: ಅಪಾಯದಮಟ್ಟ ಮೀರಿ ಹರಿಯುತ್ತಿರುವ ಕುಮಾರಧಾರ, ನೇತ್ರಾವತಿ

Update: 2019-08-09 06:47 GMT

ಉಪ್ಪಿನಂಗಡಿ : ಕುಮಾರಧಾರ, ನೇತ್ರಾವತಿ ನದಿಗಳು ಅಪಾಯದಮಟ್ಟ ಮೀರಿ ಹರಿಯುತ್ತಿದ್ದು ಸಮೀಪದ ಹಲವು ಪ್ರದೇಶಗಳು ಜಲಾವೃತಗೊಂಡಿವೆ.

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ಬಳಿ ನೇತ್ರಾವತಿ ನದಿಯು ಶ್ರೀ  ಮಹಾಕಾಳಿ ದೇವಾಲಯವನ್ನು ದಾಟಿ ಸಹಸ್ರಲಿಂಗೇಶ್ವರ ದೇವಾಲಯದ ಮುಂಭಾಗದ ಆವರಣದತ್ತ ಬಂದಿದ್ದು ದೇವಾಲಯದ ಇನ್ನೊಂದು ಬದಿಯಿಂದ ಕುಮಾರಧಾರ ನದಿಯ ನೀರು ಬಂದರೆ ಎರಡು ನದಿಗಳು ದೇವಾಲಯದ ಮುಂಭಾಗ ಸಂಗಮವಾಗಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಈ ಸಂಗಮದ ಐತಿಹಾಸಿಕ ಕ್ಷಣವನ್ನು ವೀಕ್ಷಿಸಲು ಜನರು ತಂಡೋಪ-ತಂಡವಾಗಿ ದೇವಾಲಯದತ್ತ ಆಗಮಿಸುತ್ತಿದ್ದಾರೆ. ನೆರೆಯ ಹಿನ್ನೆಲೆಯಲ್ಲಿ ಆಡಳಿತ ವರ್ಗ ಕಟ್ಟೆಚ್ಚರ ವಹಿಸಿದ್ದು, ತಕ್ಷಣದ ರಕ್ಷಣಾ ಕಾರ್ಯಾಚರಣೆಗೆ ಸಿದ್ಧಗೊಂಡು ನಿಂತಿದೆ. ಬಜತ್ತೂರು ಗ್ರಾಮದ ವಳಾಲು ಸಮೀಪ ರಾಷ್ಟ್ರೀಯ ಹೆದ್ದಾರಿಗೆ ಬಂದ ನೇತ್ರಾವತಿ ನದಿ ನೀರಿನಿಂದ ವಾಹನ ಸಂಚಾರಕ್ಕೆ ತಡೆಯುಂಟಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News