ಭಾರೀ ಮಳೆ: ಅಜಿಲಮೊಗರು ಮಸೀದಿ ಆವರಣಕ್ಕೆ ನುಗ್ಗಿದ ನೆರೆ ನೀರು
Update: 2019-08-09 12:33 IST
ಬಂಟ್ವಾಳ, ಆ. 9: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಶುಕ್ರವಾರ ಬೆಳಗ್ಗೆಯೂ ಗಾಳಿ, ಮಳೆ ಮುಂದುವರಿದ ಕಾರಣ ಕಡೇಶಿವಾಲಯ, ಅಜಿಲಮೊಗರು ಮಧ್ಯೆ ಹರಿಯುವ ನೇತ್ರಾವತಿ ನದಿಯಲ್ಲಿ ನೀರಿನ ಏರಿಕೆಯಾದ ಕಾರಣ ಇಂದು ಬೆಳಗ್ಗೆ 11.30ಕ್ಕೆ ಅಜಿಲಮೊಗರು ಮಸೀದಿ ಬಳಿ ನೀರು ಉಕ್ಕಿ ಹರಿದು ಜಲಾವೃತಗೊಂಡಿದೆ.
ಇಲ್ಲಿನ ಸಮೀಪದ ರಸ್ತೆಯಲ್ಲೆಲ್ಲಾ ನದಿ ನೀರು ಹರಿಯುತ್ತಿದ್ದು, ದೋಣಿ ಮೂಲಕ ಜನರು ಸಂಚಾರ ಮಾಡುತ್ತಿದ್ದಾರೆ. ಪ್ರತಿ ವರ್ಷ ಮಳೆ ಬಂದಾಗ ಮಸೀದಿ ಪ್ರದೇಶ ಜಲಾವೃತಗೊಳ್ಳುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಫೋಟೊ, ವೀಡಿಯೊ : ತ್ವಾಹಾ ಸಅದಿ