×
Ad

ಬಂಟ್ವಾಳ: 10.1 ಮೀ. ಮಟ್ಟದಲ್ಲಿ ಹರಿಯುತ್ತಿರುವ ನೇತ್ರಾವತಿ

Update: 2019-08-09 17:38 IST

ಬಂಟ್ವಾಳ, ಆ. 9: ಸತತ ಆರನೇ ದಿನವಾದ ಶುಕ್ರವಾರವೂ  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರಿದಿದೆ. ಗುರುವಾರ  ಹಗಲು ಕೆಲ ಹೊತ್ತು ಬಿಡುವಿದ್ದರೂ ರಾತ್ರಿ ವೇಳೆ ಧಾರಾಕಾರವಾಗಿ ಮಳೆಯಾಗಿದೆ. ಇಂದು ಬೆಳಗ್ಗೆಯೂ ಗಾಳಿ, ಮಳೆ ಮುಂದುವರಿದ ಕಾರಣ ನೇತ್ರಾವತಿ ನೀರಿನ ಮಟ್ಟ ಹೆಚ್ಚಾಗಿದೆ.

ಅಪಾಯದ ಮಟ್ಟ 8.5 ಆಗಿದ್ದು, ಇಂದು ಬೆಳಗ್ಗೆ 10ರ ವೇಳೆಗೆ ನೇತ್ರಾವತಿ ನದಿ ನೀರಿನ ಮಟ್ಟ 8.7 ಮೀಟರ್ ಇತ್ತು. ಮಧ್ಯಾಹ್ನ 9.7 ಮೀ. ಹರಿಯುತ್ತಿದ್ದ, ಇದೀಗ ಭಾರೀ ಮಳೆಯಾಗುತ್ತಿದ್ದು, 10.1ಮೀ. ಅಪಾಯಮಟ್ಟದಲ್ಲಿ ಹರಿಯುತ್ತಿದೆ. ಈಗಾಗಲೇ ಬಂಟ್ವಾಳ ಸುತ್ತಮುತ್ತಲಿನ ಪರಿಸರದಲ್ಲಿ ಕೃತಕ ನೆರೆಗೆ ಹಲವು ಮನೆಗಳು ಮುಳುಗಡೆಯಾಗಿವೆ. ತುಂಬೆ ಡ್ಯಾಂನಲ್ಲಿ 8.5 ಮೀ. ಮಟ್ಟದಲ್ಲಿ ನೇತ್ರಾವತಿ ಬೋರ್ಗರೆಯುತ್ತಿದೆ.
ಬಂಟ್ವಾಳದ ತೀರ ಪ್ರದೇಶಗಳಲ್ಲಿ ನೀರು ಪ್ರವೇಶಿಸಿದೆ. ನದಿ ತೀರದ ಕೆಲ ಮನೆ, ಅಂಗಡಿಗಳಿಗೂ ನೀರು ನುಗ್ಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News