ಇನ್ನು ಮುಂದೆ ಈ ರೈಲಿನಲ್ಲಿ ಶಾಪಿಂಗ್ ಮಾಡಬಹುದು !

Update: 2019-08-09 15:29 GMT

ಮುಂಬೈ, ಆ. 10: ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ. ಇನ್ನು ಮುಂದೆ ಭಾರತೀಯ ರೈಲ್ವೆ ರೈಲುಗಳಲ್ಲಿ ದಿನನಿತ್ಯ ಬಳಕೆ ವಸ್ತುಗಳನ್ನು ಮಾರಾಟ ಮಾಡಲಿದೆ. ಪ್ರಯಾಣಿಕರು ತಮಗೆ ಬೇಕಾದ ದಿನ ಬಳಕೆಯ ವಸ್ತುಗಳನ್ನು ಖರೀದಿಸಬಹುದು.

ಪಶ್ಚಿಮ ರೈಲ್ವೆ ವಲಯದ ಅಹ್ಮದಾಬಾದ್ ವಿಭಾಗ ಅಹ್ಮದಾಬಾದ್ ಜಂಕ್ಷನ್‌ನಿಂದ ಮುಂಬೈ ಸೆಂಟ್ರಲ್ ನಡುವೆ ಕರ್ಣಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಶುಕ್ರವಾರದಿಂದ ದಿನ ಬಳಕೆ ವಸ್ತುಗಳನ್ನು ಮಾರಾಟ ಮಾಡಲು ಆರಂಭಿಸಿದೆ. ರೈಲಿನಲ್ಲಿ ಪ್ರಯಾಣಿಕರು ಸೌಂದರ್ಯ ಸಾಧನಗಳು, ಮನೆ ಹಾಗೂ ಅಡುಗೆ ಸಲಕರಣೆಗಳು, ಇತರ ಫಿಟ್‌ನೆಸ್ ಉತ್ಪನ್ನಗಳನ್ನು ಖರೀದಿಸಬಹುದು. ಪ್ರಯಾಣಿಕರು ನಗದು ನೀಡಬೇಕು ಎಂದೇನೂ ಇಲ್ಲ. ನಗದು ಇಲ್ಲದಿದ್ದರೂ ಕ್ರೆಡಿಟ್, ಡೆಬಿಟ್, ಗೂಗಲ್ ಪೇ ಹಾಗೂ ಪೇಟಿಎಂಗಳ ಮೂಲ ಪಾವತಿಸಬಹುದು.

ಪ್ರಯಾಣಿಕರ ಸಲಹೆಯ ಹಿನ್ನೆಲೆಯಲ್ಲಿ ಪಶ್ಚಿಮ ರೈಲ್ವೆ ವಲಯದ ಮುಂಬೈ ವಿಭಾಗ ಕಳೆದ ವರ್ಷ ಡಿಸೆಂಬರ್‌ನಲ್ಲಿ ಈ ಪ್ರಮುಖ ಯೋಜನೆಯನ್ನು ಆರಂಭಿಸಲು ಚಿಂತಿಸಿತ್ತು. ಈ ಸೇವೆಯನ್ನು ಇತರ ರೈಲುಗಳಲ್ಲಿ ಕೂಡ ವಿಸ್ತರಿಸಲು ಭಾರತೀಯ ರೈಲ್ವೆ ವಿಸ್ತರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News