×
Ad

ಮಂಗಳೂರು: ನೇತ್ರಾವತಿ ನದಿಗೆ ಹಾರಿದ ಯುವತಿ

Update: 2019-08-09 21:21 IST

ಮಂಗಳೂರು, ಆ. 9: ನೇತ್ರಾವತಿ ನದಿಯ ಉಳ್ಳಾಲ ಸೇತುವೆಯಿಂದ ಯುವತಿಯೋರ್ವಳು ಶುಕ್ರವಾರ ಸಂಜೆ ಹಾರಿದ ಘಟನೆ ನಡೆದಿದೆ.

ಯುವತಿಯನ್ನು ಗಜನೀಶ್ವರಿ ಕೆ ಎಂದು ಗುರುತಿಸಲಾಗಿದ್ದು, ಸಂಜೆ 7 ಗಂಟೆಯ ಸುಮಾರಿಗೆ ತನ್ನ ಬ್ಯಾಗ್, ಮೊಬೈಲ್‌ನ್ನು ಸೇತುವೆ ಮೇಲೆಯೇ ಎಸೆದು ನದಿಗೆ ಹಾರಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳದಲ್ಲಿ ಕುತೂಹಲಿಗರ ನೂರಾರು ಜನರ ದಂಡು ನೆರೆದಿದೆ.

ಕಂಕನಾಡಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News