×
Ad

ಉಡುಪಿ: ಕೇಂದ್ರ ಸರಕಾರದ ಕ್ರಮಕ್ಕೆ ಸಿಪಿಎಂ ಖಂಡನೆ

Update: 2019-08-09 21:54 IST

ಉಡುಪಿ, ಆ.9: ಜಮ್ಮು ಕಾಶ್ಮೀರದ ಸಿಪಿಐಎಂ ಶಾಸಕ ಯುಸೂಫ್ ತರಿಗಾಮಿ ಮತ್ತಿತರ ಕಾರ್ಯಕರ್ತರ ಯೋಗ ಕ್ಷೇಮ ವಿಚಾರಿಸಲು ಶ್ರೀನಗರಕ್ಕೆ ಭೇಟಿ ನೀಡಿದ ಸಿಪಿಐಎಂ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಮತ್ತು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜ ಅವರನ್ನು ಅಲ್ಲಿನ ವಿಮಾನ ನಿಲ್ದಾಣದಲ್ಲಿಯೇ ಸ್ಥಾನ ಬದ್ಧತೆಯಲ್ಲಿಟ್ಟ ಕೇಂದ್ರ ಸರಕಾರದ ಸರ್ವಾಧಿಕಾರಿ ನೀತಿಯನ್ನು ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.

ಈ ಭೇಟಿಯ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದರೂ ಎಲ್ಲೂ ಹೋಗದಂತೆ ದಿಗ್ಬಂಧಿನ ವಿಧಿಸಿರುವ ಕ್ರಮ ಅತಿರೇಕದಿಂದ ಕೂಡಿದೆ. ತಕ್ಷಣವೇ ಅವರ ದಿಗ್ಬಂಧನ ವಾಪಾಸು ಪಡೆದು ಕಾಶ್ಮೀರಿಗಳನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News