×
Ad

​ಆ.14ರವರೆಗೆ ಚಾರ್ಮಾಡಿ ಘಾಟಿ ಬಂದ್

Update: 2019-08-09 22:18 IST

ಮಂಗಳೂರು: ರಾ.ಹೆ. 73ರ ಮಂಗಳೂರು-ವಿಲ್ಲುಪುರಂ ರಸ್ತೆಯ ಚಾರ್ಮಾಡಿ ಘಾಟಿಯ 76 ಕಿ.ಮೀ.ನಿಂದ 86.20 ಕಿ.ಮೀ. ವರೆಗಿನ ರಸ್ತೆಯಲ್ಲಿ ಗುಡ್ಡ ಕುಸಿತವಾದ ಹಿನ್ನೆಲೆಯಲ್ಲಿ ಆ.14ರ ಮಧ್ಯರಾತ್ರಿ 12 ಗಂಟೆಯವರೆಗೆ ಎಲ್ಲಾ ರೀತಿಯ ವಾಹನ ಸಂಚಾರವನ್ನು ನಿಷೇಧಗೊಳಿಸುವ ಮೂಲಕ ಚಾರ್ಮಾಡಿ ಘಾಟಿಯ ಬಂದ್‌ಗೆ ದ.ಕ. ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಉಜಿರೆ, ಧರ್ಮಸ್ಥಳ, ಕೊಕ್ಕಡ, ಗುಂಡ್ಯ, ಶಿರಾಡಿ ಮೂಲಕ ಮತ್ತು ಮೂಡಿಗೆರೆ ಹ್ಯಾಂಡ್‌ಪೋಸ್ಟ್, ಜನ್ನಾಪುರ, ಆನೆಮಹಲ್ ಮೂಲಕ ತೆರಳಲು ಅವಕಾಶ ಕಲ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News