ತುಂಬಿ ಹರಿಯುತ್ತಿರುವ ನೇತ್ರಾವತಿ: ವಳಾಲು ತೂಗುಸೇತುವೆ ನೀರುಪಾಲು
Update: 2019-08-09 22:28 IST
ಉಪ್ಪಿನಂಗಡಿ, ಆ.9: ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿ ನೀರಿನ ಪ್ರಮಾಣ ಹೆಚ್ಚುತ್ತಿದ್ದು, ನೀರಿನ ರಭಸಕ್ಕೆ ವಳಾಲು ತೂಗುಸೇತುವೆ ನೀರುಪಾಲಾಗಿದೆ.
ಸಂಜೆಯ ವೇಳೆಗಾಗಲೇ ತೂಗುಸೇತುವೆಯ ಮೇಲಕ್ಕೆ ನೀರು ಬಂದಿದ್ದು, ಮರಗಳು ಬಡಿದು ಹಾನಿ ಸಂಭವಿಸಿತ್ತು. ಇದೀಗ ರಾತ್ರಿಯಾಗುತ್ತಿದ್ದಂತೆ ಸೇತುವೆ ಮುರಿದು ಬಿದ್ದಿದ್ದು, ನೀರುಪಾಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.