ಉಪ್ಪಿನಂಗಡಿ: ಡೆಂಗ್ ಜ್ವರಕ್ಕೆ ಯುವಕ ಬಲಿ
Update: 2019-08-09 22:56 IST
ಉಪ್ಪಿನಂಗಡಿ: ಡೆಂಗ್ ಜ್ವರದಿಂದ ಬಳಲುತ್ತಿದ್ದ ತುರ್ಕಳಿಕೆ ನಿವಾಸಿ ದಿ. ಅಬೂಬಕರ್ ಎಂಬವರ ಪುತ್ರ ಮಹಮ್ಮದ್ ನಿಝಾಮುದ್ದೀನ್ (25) ಶುಕ್ರವಾರ ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ನಿಝಾಮುದ್ದೀನ್ 10 ದಿನಗಳಿಂದ ಡೆಂಗ್ ಜ್ವರದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ನಿಝಾಮುದ್ದೀನ್ ವೃತ್ತಿಯಲ್ಲಿ ಪೈಂಟರ್ ಆಗಿದ್ದು, ಆಕರ್ಷಕ ಕ್ರಿಕೆಟ್ ವೀಕ್ಷಣೆ ವಿವರಣೆಗಾರನಾಗಿಯೂ ಚಿರಪರಿಚಿತರಾಗಿದ್ದರು. ಮೃತರು ತಾಯಿ ಮತ್ತು 3 ಮಂದಿ ಸಹೋದರರು, 3 ಮಂದಿ ಸಹೋದರಿಯರನ್ನು ಅಗಲಿದ್ದಾರೆ.