ಉಳ್ಳಾಲದಲ್ಲಿ ಎಲ್ಲೆಡೆ ನೆರೆ: ಜನಜೀವನ ಅಸ್ತವ್ಯಸ್ತ

Update: 2019-08-10 07:21 GMT

ಉಳ್ಳಾಲ, ಆ.10: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ಆರ್ಭಟ ಇಂದು ಕೂಡಾ ಮುಂದುವರಿದಿದ್ದು, ಉಳ್ಳಾಲದ ಬಹುತೇಕ ಪ್ರದೇಶಗಳು ಜಲಾವೃತಗೊಂಡಿದೆ.

ಉಳ್ಳಾಲದ ಅಳೇಕಲ, ಹಳೆಕೋಟೆ, ಉಳಿಯ, ಮಿಲ್ಲತ್ ನಗರ, ಬಸ್ತಿಪಡ್ಪು ಮತ್ತಿತರ ಪ್ರದೇಶಗಳು ಜಲಾವೃತಗೊಂಡಿವೆ. ಹಲವು ಮನೆ,ಅಂಗಡಿ ಮುಂಗಟ್ಟುಗಳ ಅಂಗಳ ಮತ್ತು ಒಳಗೆ ನೆರೆ ನೀರು ನುಗ್ಗಿವೆ.

ಕಲ್ಲಾಪು, ಪಟ್ಲದಲ್ಲೂ ಮನೆಗಳಿಗೆ ನೆರೆ ನೀರು ನುಗ್ಗಿದೆ. ಇಲ್ಲಿನ ಜನರನ್ನು ದೋಣಿ ಮೂಲಕ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗುತ್ತದೆ. ಈ ಪ್ರದೇಶದ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಇಂದು ಬೆಳಗ್ಗೆಯಿಂದ ಮಳೆ ಮತ್ತಷ್ಟು ಬಿರುಸು ಪಡೆಯುತ್ತಿದ್ದು ಜನರು ಮನೆಯಿಂದ ಹೊರಗಿಳಿಯಲು ಹಿಂಜರಿಯುತ್ತಿದ್ದಾರೆ. ಉಳ್ಳಾಲ ತೋಟ ಮಸೀದಿಗೂ ನೆರೆ ನೀರು ನುಗ್ಗಿದೆ.

ಉಳ್ಳಾಲ, ಕಲ್ಲಾಪುವಿನಲ್ಲಿ ನೆರೆ ಪೀಡಿತ ಪ್ರದೇಶಗಳಿಗೆ ಶನಿವಾರ ಬೆಳಗ್ಗೆ ಶಾಸಕ ಯು.ಟಿ.ಖಾದರ್ ಭೇಟಿ ಪರಿಶೀಲನೆ ನಡೆಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News