ಭಂಡಾರಿಬೆಟ್ಟು: ಜಲಾವೃತ ಮನೆಯಿಂದ ಜನಾರ್ದನ ಪೂಜಾರಿ ಕುಟುಂಬದ ರಕ್ಷಣೆ
Update: 2019-08-10 13:50 IST
ಬಂಟ್ವಾಳ, ಆ.10: ತಾಲೂಕಿನಾದ್ಯಂತ ಶನಿವಾರವೂ ಬೆಳಗ್ಗೆಯೂ ಭಾರೀ ಗಾಳಿ- ಮಳೆ ಮುಂದುವರಿದಿದ್ದು, ನೇತ್ರಾವತಿ ನೀರಿನ ಮಟ್ಟ ತೀವ್ರ ಹೆಚ್ಚಾಗಿದ್ದು, ಅಪಾಯಕಾರಿಯಾಗಿ ಹರಿಯುತ್ತಿದೆ.
ಕಳೆದ ರಾತ್ರಿಯಿಂದ ಸುರಿದ ಮಳೆಗೆ ಬಂಟ್ವಾಳದಲ್ಲಿ ಹಲವಾರು ಮನೆಗಳು ಜಲಾವೃತಗೊಂಡಿದೆ.
ನೇತ್ರಾವತಿ ಪ್ರವಾಹದಿಂದ ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿಯವರ ಮನೆಗೂ ನೆರೆ ನುಗ್ಗಿದೆ. ಇದರಿಂದ ಭಂಡಾರಿಬೆಟ್ಟುವಿನಲ್ಲಿರುವ ಪೂಜಾರಿಯ ಮನೆ ಜಲಾವೃತವಾಗಿದ್ದು, ಮನೆಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.
ಚಿತ್ರ: ದೀಪಕ್ ಸಾಲ್ಯಾನ್ ಬಿ.ಸಿ.ರೋಡ್