ಗೋವುಗಳ ಕಳೇಬರ ಸಾಗಾಟ ಆರೋಪ: ವ್ಯಕ್ತಿಗೆ ದುಷ್ಕರ್ಮಿಗಳಿಂದ ಹಲ್ಲೆ

Update: 2019-08-10 14:55 GMT

ನೋಯ್ಡಿ, ಆ. 10: ವಧಿಸಿದ ಗೋವುಗಳನ್ನು ಸಾಗಾಟ ಮಾಡುತ್ತಿರುವ ವದಂತಿ ಹಿನ್ನೆಲೆಯಲ್ಲಿ ಗ್ರೇಟರ್ ನೋಯ್ಡಾದಲ್ಲಿ ಗುಂಪೊಂದು ಗಾಝಿಯಾಬಾದ್ ನಗರಾಡಳಿತದ ಗುತ್ತಿಗೆದಾರರೋರ್ವರ ಹಲ್ಲೆ ನಡೆಸಿದೆ. ಘಟನೆಗೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ. ಇತರರ ಶೋಧ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ಗುತ್ತಿಗೆದಾರ ಮಹೇಂದ್ರ ಮೂರು ಗೋವು, ಎರಡು ಕರು, ಹಾಗೂ 12 ಎಮ್ಮೆ ಕರುಗಳ ಕಳೇಬರಗಳನ್ನು ವಿಲೇವಾರಿ ಮಾಡಲು ಶುಕ್ರವಾರ ಬೆಳಗ್ಗೆ ವಾಹನದಲ್ಲಿ ಸಾಗಿಸುತ್ತಿದ್ದ ಸಂದರ್ಭ ಗೌರ್ ನಗರದ ಸಮೀಪದ ದುಷ್ಕರ್ಮಿಗಳು ಹಲ್ಲೆ ನಡೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಛಿಸಾಸ್ರಿ ನದಿ ಸಮೀಪ ಇರುವ ಘಟಕದಲ್ಲಿ ವಿಲೇವಾರಿ ಮಾಡಲು ಮಹೇಂದ್ರ ಸಂಬಂಧಿತ ಅಧಿಕಾರಿಗಳ ಅನುಮತಿ ಪಡೆದು ಈ ಗೋವುಗಳ ಕಳೇಬರವನ್ನು ವಾಹನದಲ್ಲಿ ಸಾಗಿಸುತ್ತಿದ್ದರು. ಈ ಸಂದರ್ಭ ಗೌರ್ ನಗರದಲ್ಲಿ ದುಷ್ಕರ್ಮಿಗಳು ವಾಹನ ತಡೆದರು. ವಾಹನದ ಕಿಟಕಿ ಗಾಜುಗಳಿಗೆ ಹಾನಿ ಎಸಗಿದರು. ಚಾಲಕನ ಮೇಲೆ ಹಲ್ಲೆ ನಡೆಸಿದರು ಎಂದು ಅವರು ತಿಳಿಸಿದ್ದಾರೆ.

ಇದರಲ್ಲಿ ಎರಡು ಗೋವುಗಳ ಕಳೇಬರ ಎನ್‌ಜಿಒ ಅಧ್ಯಕ್ಷ, ಹಾಗೂ ದಿಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಾವಾದಿಗೆ ಸೇರಿದ್ದು. ಅವರ ಎರಡು ಗೋವುಗಳು ಮೃತಪಟ್ಟಿದ್ದವು. ಈ ಗೋವುಗಳ ಕಳೇಬರವನ್ನು ವಿಲೇವಾರಿ ಮಾಡಲು ಗಾಝಿಯಾಬಾದ್ ನಗರಾಡಳಿತದಿಂದ ಅವರು ಪರವಾನಿಗೆ ಪಡೆದಿದ್ದರು. ಅನಂತರ ಗುತ್ತಿಗೆದಾರ ಗೋವುಗಳನ್ನು ಕಳೇಬರವನ್ನು ವಾಹನದಲ್ಲಿ ವಿಲೇವಾರಿಗೆ ಕೊಂಡೊಯ್ಯುತ್ತಿದ್ದ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News