ಪುತ್ತೂರು : ಕಾಲು ಸಂಕ ದಾಟುತ್ತಿದ್ದ ವ್ಯಕ್ತಿ ನೀರು ಪಾಲು

Update: 2019-08-10 17:39 GMT

ಪುತ್ತೂರು : ನಗರದ ಹೊರವಲಯದ ಚಿಕ್ಕಮುಡ್ನೂರು ಗ್ರಾಮದ ಅಂದ್ರಟ ಎಂಬಲ್ಲಿ ತುಂಬಿ ಹರಿಯುತ್ತಿದ್ದ ತೋಡಿನ ಮುಳುಗಡೆಯಾಗಿದ್ದ ಕಾಲು ಸಂಕ ದಾಟುತ್ತಿದ್ದ ವೇಳೆ ಆಕಸ್ಮಿಕವಾಗಿ ಆಯತಪ್ಪಿ ವ್ಯಕ್ತಿಯೊಬ್ಬರು ನೀರು ಪಾಲಾಗಿ ಕಣ್ಮರೆಯಾದ ಘಟನೆ ಶನಿವಾರ ಸಂಜೆ ನಡೆದಿದೆ.

ಚಿಕ್ಕಮುಡ್ನೂರು ಗ್ರಾಮದ ಅಂದ್ರಟ ಎಂಬಲ್ಲಿ ಕಳೆದ ಹಲವು ವರ್ಷಗಳಿಂದ ವಾಸ್ತವ್ಯವಿದ್ದ, ಮೂಲತಃ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ರೆಂಜ ನಿವಾಸಿ ಜಗದೀಶ್ ಯಾನೆ ಜನ್ನ (30) ನೀರು ಪಾಲಾದವರು.

ಕೂಲಿ ಕಾರ್ಮಿಕರಾದ ಜಗದೀಶ್ ಯಾನೆ ಜನ್ನ ಅವರು ಅವಿವಾಹಿತರಾಗಿದ್ದು, ಅಂದ್ರಟದಲ್ಲಿರುವ ಉದ್ಯಮಿಯೊಬ್ಬರಿಗೆ ಸೇರಿದ ತೋಟದ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದರು ಹಾಗೂ ಮನೆ ನೋಡಿಕೊಳ್ಳುವ ಜವಾಬ್ದಾರಿ ಹೊತ್ತಿದ್ದರು. ಅವರು ಉದ್ಯಮಿಗೆ ಸೇರಿದ ಮನೆಯಲ್ಲಿಯೇ ಕಳೆದ ಹಲವು ವರ್ಷಗಳಿಂದ ತನ್ನ ತಾಯಿ ಮತ್ತು ತಂಗಿಯ ಜತೆ ವಾಸ್ತವ್ಯವಿದ್ದರೆಂದು ತಿಳಿದು ಬಂದಿದೆ.

ಶನಿವಾರ ಸಂಜೆ ಅವರು ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.ಅಂದ್ರಟ ತೋಡಿನಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ಜಗದೀಶ್ ಯಾನೆ ಜನ್ನ ಅವರು ಸಂಕ ದಾಟುತ್ತಿದ್ದ ವೇಳೆ ಅವರು ಆಕಸ್ಮಿಕವಾಗಿ ಆಯತಪ್ಪಿ ಹೊಳೆ ನೀರು ಪಾಲಾಗಿ ಕಣ್ಮರೆಯಾಗಿದ್ದಾರೆ. ಘಟನಾ ಸ್ಥಳಕ್ಕೆ ಪುತ್ತೂರು ಉಪವಿಭಾಗಾಧಿಕಾರಿ ಹೆಚ್.ಕೆ. ಕೃಷ್ಣಮೂರ್ತಿ, ನಗರ ಠಾಣೆಯ ಎಸ್‍ಐ ತಿಮ್ಮಪ್ಪ ನಾಯ್ಕ್  ಭೇಟಿ ನೀಡಿದ್ದಾರೆ.

ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News